ಬಾವಿಯಲ್ಲಿ ಬಾಲಕರಿಬ್ಬರ ದುರ್ಮರಣ

2  boys died in water at athani!

24-05-2018

ಬೆಳಗಾವಿ: ಆಟ ಆಡಲು ಹೋಗಿ ಬಾವಿಗೆ ಬಿದ್ದ ಇಬ್ಬರು ಬಾಲಕರು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ, ಬೆಳಗಾವಿಯ ಅಥಣಿ ತಾಲ್ಲೂಕಿನ ಕೊಕಟನೂರು ಗ್ರಾಮದಲ್ಲಿ ನಡೆದಿದೆ. ಅಭಿಷೇಕ್ ಬಸವರಾಜ ಮಡಿವಾಳ(5) ಹಾಗೂ ಆದರ್ಶ್ ಸುಭಾಷ ತಳವಾರ(6) ಮೃತ ಬಾಲಕರು. ಮೃತ ಬಾಲಕ ಆದರ್ಶ ಅವರ ತಂದೆ ಸುಭಾಷ ತಳವಾರ ಅವರ ನಿವಾಸ ಬಳಿ, ಅವರಿಗೆ ಸೇರಿದ್ದ ಬಾಬಿ ಹತ್ತಿರ ಇಬ್ಬರೂ ಬಾಲಕರು ಆಟವಾಡುತ್ತಿದ್ದರು. ಕೆಲ ಕಾಲದ ನಂತರ ಸದ್ದೇ ಇಲ್ಲದಂತಾಗಿದ್ದು, ಪೋಷಕರು ಹುಡುಕಾಟ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಐಗಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

water dead ಪರಿಶೀಲನೆ ಪ್ರಕರಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ