‘ದಲಿತ ಎನ್ನುವ ಕಾರಣಕ್ಕೆ ಡಿಸಿಎಂ ಹುದ್ದೆ ಕೊಟ್ಟಿಲ್ಲ’- ಪರಂ ಖಡಕ್ ಉತ್ತರ24-05-2018

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ನಮ್ಮಲ್ಲಿ ಕೋಟಾ ಸಿಸ್ಟಂ ಇಲ್ಲ. ಅರ್ಹತೆ ಆಧಾರದ ಮೇಲೆ, ಪ್ರಾದೇಶಿಕ ಆಧಾರದ ಮೇಲೆ ಕೊಡಲಾಗುತ್ತದೆ. 'ನಾನು ದಲಿತ ಎನ್ನುವ ಕಾರಣಕ್ಕೆ ಡಿಸಿಎಂ ಹುದ್ದೆ ಕೊಟ್ಟಿಲ್ಲ. ನನ್ನ ಅರ್ಹತೆ ಆಧಾರದ ಮೇಲೆ ಡಿಸಿಎಂ ಪಟ್ಟ ಕೊಟ್ಟಿದ್ದಾರೆ' ಎಂದು ದಲಿತ ಸಿಎಂ ವಿಚಾರವಾಗಿ ಕೇಳಿದ ಪ್ರೆಶ್ನೆಗಳಿಗೆ ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಖಡಕ್ ಉತ್ತರ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫ್ಲೋರ್ ಟೆಸ್ಟ್ ನಂತರ ಸಮನಯ್ವ ಸಮಿತಿ ಸಭೆ ನಡೆಸುತ್ತೇವೆ, ಸಭೆಯಲ್ಲಿ ಎಲ್ಲ ವಿಚಾರಗಳನ್ನು ಚರ್ಚಿಸುತ್ತೇವೆ ಎಂದರು. ಈಗಾಗಲೇ ಸ್ಪೀಕರ್ ಚುನಾವಣೆಗೆ ನಮ್ಮ ಪಕ್ಷದಿಂದ ರಮೇಶ್ ಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ. ಸ್ಪೀಕರ್ ಹುದ್ದೆಯಲ್ಲಿರುವವರು ಯಾವುದೇ ಪಕ್ಷಕ್ಕೆ ಸೇರಿದವರಲ್ಲ. ಸ್ಪೀಕರ್ ಹುದ್ದೆ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲ, ಬಿಜೆಪಿ ನಾಯಕರು ಯಾವುದೇ ಸ್ಪರ್ಧೆ ಇಲ್ಲದೆ ರಮೇಶ್ ಕುಮಾರ್ ಅವರನ್ನು ಆಯ್ಕೆ ಮಾಡೋದಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

ನಾವು ಎಲ್ಲ ಶಾಸಕರು ಒಟ್ಟಿಗೆ ಇದ್ದೇವೆ, ಫ್ಲೋರ್ ಟೆಸ್ಟ್ ನಲ್ಲಿ ನಾವು ಗೆಲ್ಲುತ್ತೇವೆ, ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಸೆಕ್ಯುರಿಟಿ ಸಮಸ್ಯೆಯಾಗಿಲ್ಲ, ಟ್ರಾಫಿಕ್ ಸಮಸ್ಯೆಯಿಂದ ಅವರು ಅಪ್ಸೆಟ್ ಆಗಿದ್ದರು. ಚಾಲುಕ್ಯ ಸರ್ಕಲ್ ನಿಂದ ಪ್ರಮಾಣ ವಚನ ಕಾರ್ಯಕ್ರಮಕ್ಕೆ ನಡೆದುಕೊಂಡು ಬಂದಿದ್ದಾರೆ. ಇದು ಉದ್ದೇಶ ಪೂರ್ವಕವಾಗಿ ಮಾಡಿದ್ದಲ್ಲ. ಟ್ರಾಫಿಕ್ ಸಮಸ್ಯೆಯಿಂದ ತೊಂದರೆ ಆಗಿದ್ದು. ಸಹಜವಾಗಿ ಮಮತಾ ಬ್ಯಾನರ್ಜಿ ಕೋಪಗೊಂಡಿದ್ದರು ಅಷ್ಟೇ, ಬಳಿಕ ಅವರನ್ನ ಸಮಾಧಾನ ಪಡಿಸಲಾಗಿದೆ ಎಂದು ಡಿಸಿಎಂ ಸ್ಪಷ್ಟನೆ ನೀಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

G.paramesgwar Mamata banerjee ಸಮಾಧಾನ ಟ್ರಾಫಿಕ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ