ಯುವಕನ ಕೊಲೆಗೈದಿದ್ದ 9 ಮಂದಿ ಪೊಲೀಸ್ ಬಲೆಗೆ

murder: 9 accused and arrested

24-05-2018

ಬೆಂಗಳೂರು: ಮಕ್ಕಳ ಕಳ್ಳನೆಂದು ಭಾವಿಸಿ ರಾಜಸ್ಥಾನ ಮೂಲದ ಯುವಕಯೊಬ್ಬನ ಮೇಲೆ ಹಲ್ಲೆ ನಡೆಸಿ ಕೊಲೆಗೈದ 9 ಮಂದಿಯನ್ನು ಚಾಮರಾಜಪೇಟೆ ಪೊಲೀಸರು ಬಂಧಿಸಿದ್ದಾರೆ.

ಚಾಮರಾಜಪೇಟೆಯ ಅನುಭವ್ (26), ವಸಂತ್ ಕುಮಾರ್ (32), ಗೋಪಿ (18), ಬಾಲನ್ (30), ನಂದ (20), ತಿರುಮಲೇಶ (28), ರಾಜೇಶ್ (18) ನನ್ನು ಬಂಧಿಸಿ ಕೃತ್ಯದಲ್ಲಿ ಭಾಗಿಯಾಗಿದ್ದ ಇಬ್ಬರು ಅಪ್ರಾಪ್ತ ಬಾಲಕರನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಿದ್ದಾರೆ.

ಪೆನ್ಷನ್ ಮೊಹಲ್ಲಾದ ಬಳಿ ಕಳೆದ ಶುಕ್ರವಾರ ಮಧ್ಯಾಹ್ನ 1.40ರ ವೇಳೆ ಮಕ್ಕಳ ಕಳ್ಳನೆಂದು ಭಾವಿಸಿ ರಾಜಸ್ತಾನ ಮೂಲದ ಕಾಲೂರಾಂ ಬಚ್ಚನ್ ರಾಂ (26) ಎಂಬಾತನಿಗೆ ಮನಬಂದಂತೆ ಥಳಿಸಿ ಕೊಲೆ ಮಾಡಿದ್ದರು ಎಂದು ಡಿಸಿಪಿ ರವಿಚನ್ನಣ್ಣನವರ್ ತಿಳಿಸಿದ್ದಾರೆ.

ಉದ್ಯೋಗ ಅರಸಿ ಕೆಲ ತಿಂಗಳ ಹಿಂದಷ್ಟೆ ನಗರಕ್ಕೆ ಬಂದಿದ್ದ ಕಾಲೂರಾಮ್ ಉದ್ದವಾದ ಕೂದಲು,ಗಡ್ಡ ಬಿಟ್ಟು ಓಡಾಡುತ್ತಿದ್ದರಿಂದ ಆತನನ್ನು ಕಂಡ ಸ್ಥಳೀಯರು, ಮಕ್ಕಳ ಕಳ್ಳನೆಂದು ಭಾವಿಸಿ ಥಳಿಸಿ ಕೊಲೆಗೈದಿದ್ದರು. ಈ ಸಂಬಂಧ ವಿಡಿಯೋ ದೃಶ್ಯಗಳನ್ನಾಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.

ನಗರದಲ್ಲಿ ಮಕ್ಕಳನ್ನು ಅಪಹರಣ ಮಾಡುವ ಕಳ್ಳರ ತಂಡಗಳು ಇರುವುದಿಲ್ಲ. ಸಾರ್ವಜನಿಕರು ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು. ಅನುಮಾನಾಸ್ಪಾದ ವ್ಯಕ್ತಿಗಳು ಕಂಡು ಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವಂತೆ ಅವರು ಮನವಿ ಮಾಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Murder Arrest ಅಪಹರಣ ಸಾರ್ವಜನಿಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ