ಮುಂದುವರೆದ ಕೈ ಶಾಸಕರ ಹೊಟೇಲ್ ವಾಸ್ತವ್ಯ

congress MLAs one more day at Hilton hotel!

24-05-2018

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶದ ದಿನಂದಿಂದಲೂ, ರೆಸಾರ್ಟ್, ಹೊಟೇಲ್ಗಳಲ್ಲಿ ತಂಗಿದ್ದ ಕಾಂಗ್ರೆಸ್ ಶಾಸಕರ ವಾಸ್ತವ್ಯ ಮುಂದುವರಿಯಲಿದೆ. ಸದ್ಯಕ್ಕೆ ಹಿಲ್ಟನ್ ಹೊಟೇಲ್ ನಲ್ಲಿರುವ ಕೈ ಶಾಸಕರು, ನಾಳೆ ಬಹುಮತ ಸಾಬೀತು ಪಡಿಸುವವರೆಗೂ ಹೊಟೇಲ್ ನಲ್ಲೆ ಉಳಿಯಲಿದ್ದಾರೆ. ಬಹುಮತ ಸಾಬೀತಿನ ನಂತರ ತಮ್ಮ ತಮ್ಮ ಕ್ಷೇತ್ರಗಳಿಗೆ ತೆರಳಲಿದ್ದಾರೆ. ಇಂದು ಕೂಡ ಕಾಂಗ್ರೆಸ್ ಮುಖಂಡರು ಶಾಸಕರನ್ನು ಭೇಟಿಯಾಗುವ ಸಾಧ್ಯತೆಗಳಿವೆ. ನಿನ್ನೆ ಶಾಸಕರನ್ನು ಭೇಟಿಯಾಗಿದ್ದ ಸೋನಿಯಾ ಗಾಂಧಿ, ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್ ಶಾಸಕರೊಂದಿಗೆ ಹೊಂದಿಕೊಂಡು ಹೋಗುವಂತೆ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.


ಸಂಬಂಧಿತ ಟ್ಯಾಗ್ಗಳು

Resort MLA ಮುಖಂಡ ಸಲಹೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ