ರಾಜರಾಜೇಶ್ವರಿ ನಗರದಲ್ಲಿ ಪೊಲೀಸರ ಕಟ್ಟೆಚ್ಚರ

Election: High police security at Rajarajeshwari nagar

23-05-2018

ಬೆಂಗಳೂರು: ನಕಲಿ ಮತದಾರರ ಗುರುತಿನ ಪತ್ರಗಳು ಪತ್ತೆಯಾದ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಇದೇ ತಿಂಗಳ 28ರಂದು ಚುನಾವಣೆ ನಡೆಯಲಿದ್ದು ಪೊಲೀಸರು ಶಾಂತ ಹಾಗೂ ಮುಕ್ತ ಮತದಾನಕ್ಕಾಗಿ ಎಲ್ಲಾ ರೀತಿಯ ಮುಂಜಾಗೃತ ಕ್ರಮಗಳನ್ನು ಕೈಗೊಂಡಿದ್ದಾರೆ.

ಕ್ಷೆತ್ರದ ಹಲವು ರಸ್ತೆಗಳಲ್ಲಿ ಪೊಲೀಸರು, ಅರೆಸೇನಾ ಪಡೆ ಕ್ಷೇತ್ರದ ಪಥಸಂಚಲನ ಮಾಡಿದ್ದು ಚುನಾವಣಾಧಿಕಾರಿಗಳು ವಾಹನಗಳ ತಪಾಸಣೆ ಕಾರ್ಯ ಕೈಗೊಂಡಿದ್ದಾರೆ. ಯಾವುದೇ ರೀತಿಯ ಅಕ್ರಮ ನಡೆಯದಂತೆ ಚುನಾವಣಾ ಆಯೋಗ ಮತ್ತು ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿವೆ.

ಇನ್ನು ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ಮುನಿರತ್ನ ಬಿಜೆಪಿಯಿಂದ ತುಳಸಿ ಮುನಿರಾಜೇಗೌಡ ಜೆಡಿಎಸ್‍ನಿಂದ ರಾಮಚಂದ್ರ ಹಾಗೂ ಹುಚ್ಚಾ ವೆಂಕಟ್ ಸೇರಿದಂತೆ ಹಲವು ಅಭ್ಯರ್ಥಿಗಳು ಕಣದಲ್ಲಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಹುಚ್ಚಾ ವೆಂಕಟ್ ಗೆಲ್ಲಬಹುದೆಂಬ ನಿರೀಕ್ಷೆ ಇದೆ , ಕಾರಣ ಕೆಲವು ರಾಜಕಾರಣಿಗಳು ಚುನಾವಣೆಯಲ್ಲಿ ಗೆಲ್ಲಲೇ ಬೇಕೆಂಬ ಆಸೆಯಿಂದ ಅಡ್ಡದಾರಿ ತುಳಿದಿರುವುದು , ಹುಚ್ಚ ವೆಂಕಟ್ ಗೆ ಲಾಭವಾಗಿದೆ.... Kannada News
  • ಸತೀಶ್ ರಾಜ್
  • ಓದುಗ
ಹೌದು , ಒಂದು ರೀತಿ ಆಲೋಚನೆ ಮಾಡಿದರೆ , ಹುಚ್ಚ ವೆಂಕಟ್ ಗೆಲ್ಲುವುದು ಒಳ್ಳೆಯದು ಅನ್ನಿಸುತ್ತೆ, ನೇರ ನುಡಿ ನೇರ ಮಾತಿನ ವ್ಯಕ್ತಿ ಅವರು ... Star Kannada
  • ಶ್ವೇತ
  • ಗೃಹಿಣಿ