‘ಸಮ್ಮಿಶ್ರ ಸರ್ಕಾರ 6ತಿಂಗಳೂ ಇರೋದಿಲ್ಲ’-ಈಶ್ವರಪ್ಪ

congress-jds coalition government will collapse soon

23-05-2018

ಶಿವಮೊಗ್ಗ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ವಿರೋಧಿಸಿ ಶಿವಸಮೊಗ‌್ಗದಲ್ಲಿ ಬಿಜೆಪಿ ಕರಾಳ ದಿನ ಆಚರಣೆ ಮಾಡಿದೆ. ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಬಳಿಕ ಮಾತನಾಡಿ ಈಶ್ವರಪ್ಪ ರಾಜ್ಯದ '20 ಜಿಲ್ಲೆಗಳಲ್ಲಿ ಜೆಡಿಎಸ್ ಖಾತೆಯನ್ನೇ ತೆರೆದಿಲ್ಲ. ಇಂತಹ ಕುಮಾರಸ್ವಾಮಿಯವರನ್ನು ಯಾವ ಕಾರಣಕ್ಕೆ ಸಿಎಂ ಮಾಡಲು ನೀವು ರಾಜ್ಯಕ್ಕೆ ಬರುತ್ತಿದ್ದೀರಿ' ಎಂದು ಈಶ್ವರಪ್ಪ ಪದಗ್ರಹಣಕ್ಕೆ ಆಗಮಿಸುತ್ತಿರುವ ರಾಷ್ಟ್ರೀಯ ನಾಯಕರಿಗೆ ಪ್ರಶ್ನೆ ಮಾಡಿದ್ದಾರೆ.

ಹೆಚ್ಡಿಕೆ ಸುಳ್ಳು ಸಿಎಂ ಆಗಲಿದ್ದಾರೆ. ಒಮ್ಮೆ ಸಾಲ ಮನ್ನಾ ಮಾಡಲ್ಲ, ಮತ್ತೊಮ್ಮೆ ಸಾಲ ಮನ್ನಾ ಮಾಡುತ್ತೀನಿ ಎಂದು ಹೇಳುವ ಕುಮಾರ ಸ್ವಾಮಿ. ರೈತ ದ್ರೋಹಿ ಎಂದು ಕಿಡಿಕಾರಿದ್ದಾರೆ. ಸಮ್ಮಿಶ್ರ ಸರ್ಕಾರ 6 ತಿಂಗಳೂ ಇರೋದಿಲ್ಲ. ಕಾಂಗ್ರೆಸ್ ಮುಳುಗುವ ಹಡುಗು. ಮುಳುಗುವವರು ಜೆಡಿಎಸ್ ಅನ್ನು ಹುಲ್ಲಿನ ರೀತಿ ಹಿಡಿದು ಕೊಂಡು ಹಿಂಬದಿಯಿಂದ ಅಧಿಕಾರಕ್ಕೆ ಬಂದಿದ್ದಾರೆ ಎಂದು ದೂರಿದರು.

ರಾಷ್ಟ್ರೀಯ ಮಟ್ಟದಲ್ಲಿ ಯಾರೇ ಒಂದಾದರೂ ಕೇಂದ್ರದಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನ ಮಂತ್ರಿ ಆಗುವುದನ್ನು ತಪ್ಪಿಸಲು ಆಗದು ಎಂದರು.


ಸಂಬಂಧಿತ ಟ್ಯಾಗ್ಗಳು

K.S.Eshwarappa protest ರಾಷ್ಟ್ರೀಯ ನರೇಂದ್ರ ಮೋದಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ