‘2004ರ ದಿನಗಳು ಮತ್ತೆ ನೆನಪಾಗುತ್ತಿವೆ’-ಶೋಭಾ ಕರಂದ್ಲಾಜೆ

BJP protests against Congress-JDS

23-05-2018

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ವಿರೋಧಿಸುತ್ತಿರುವ ರಾಜ್ಯ ಬಿಜೆಪಿ, ರಾಜ್ಯಾದ್ಯಂತ ಜನ ಮತ ವಿರೋಧಿ ದಿನವನ್ನು ಆಚರಿಸುತ್ತಿದೆ. ಸಂಸದೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆಗಿಳಿದಿದ್ದರು. ಈ ಮೇಳೆ ಮಾತನಾಡಿದ ಶೋಭಾ ಕರಂದ್ಲಾಜೆ, ‘2004 ದಿನಗಳು ಮತ್ತೆ ನೆನಪಾಗುತ್ತಿದೆ. ಅಂದು ಕೂಡ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಆಗಿತ್ತು, ಅದು ತುಂಬಾ ದಿನ ಇರಲಿಲ್ಲ. ಕಳೆದ ಐದು ವರ್ಷಗಳ ಕಾಂಗ್ರೆಸ್ ಆಡಳಿತದಿಂದ ಜನ ಬೇಸತ್ತು ಕಾಂಗ್ರೆಸ್ ಅನ್ನು ಸೋಲಿಸಿದ್ದರು. ಹಲವಾರು ಮಂತ್ರಿಗಳು ಸೋತರು. ಕಾಂಗ್ರೆಸ್ ಸರ್ಕಾರ ಇದ್ದಾಗ ದುರಹಂಕಾರದಿಂದ ವರ್ತಿಸಿದರು ಎಂದು ಟೀಕೆ ಮಾಡಿದ್ದಾರೆ.

ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆ ಮುಚ್ಚಿ, ಎಸಿಬಿ ರಚನೆ ಮಾಡಿದರು. ಕೊನೆಗೆ ಲೋಕಾಯುಕ್ತರಿಗೆ ಚೂರಿ ಹಾಕಿದ ಘಟನೆಯೂ ನಡೆಯಿತು. ಸಿದ್ದರಾಮಯ್ಯ ಅವರ ಸ್ವಂತ ಜಿಲ್ಲೆಯಲ್ಲಿ ಅವರನ್ನೇ ಸೋಲಿಸಿದರು. ಬಾದಾಮಿಯಲ್ಲಿ ಗೆದ್ದಿರೋದು ಕೇವಲ ಎರಡು ಮೂರು ಸಾವಿರ ಮತಗಳಿಂದ ಮಾತ್ರ ಎಂದು ಲೇವಡಿ ಮಾಡಿದರು.

ವಿರೋಧ ಪಕ್ಷದಲ್ಲಿ ಕೂತುಕೊಳ್ಳಿ ಎಂದು ಜನಾದೇಶ ಕೊಟ್ಟರೂ ಬಿಜೆಪಿ, ಯಡಿಯೂರಪ್ಪ ಅವರನ್ನು ಅಧಿಕಾರದಿಂದ ದೂರ ಇಡಲು ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ. ಪಂಜಾಬ್ ನಲ್ಲಿ ಕಾಂಗ್ರೆಸ್ ಸರ್ಕಾರ ಇಲ್ಲ. ಅಲ್ಲಿ ಇರೋದು ಅಮರಿಂದರ್ ಸಿಂಗ್ ಸರ್ಕಾರ, ಕಾಂಗ್ರೆಸ್ ಗೆ ಅವರು ಕಿಮ್ಮತ್ತು ಕೊಡಲ್ಲ. ಕರ್ನಾಟಕ ಕಾಂಗ್ರೆಸ್ ಗೆ ಎಟಿಎಂ ಆಗಿತ್ತು ಎಂದು ಆರೋಪಿಸಿದ ಅವರು, 190 ಕ್ಷೇತ್ರದಲ್ಲಿ ಡೆಪಾಸಿಟ್ ಕಳೆದುಕೊಂಡಿರುವವರು ಇವತ್ತು ಸಿಎಂ ಎಂದು ಮೆರೆಯುತ್ತಿದ್ದಾರೆ ಎಂದು ಜೆಡಿಎಸ್ ಗೆ  ಟಾಂಗ್ ನೀಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ