ವಿವಿ ಪ್ಯಾಟ್‌ ಖಾಲಿ ಬಾಕ್ಸ್ ಪತ್ತೆ ಪ್ರಕರಣ: ಮೂವರ ಬಂಧನ

VV Pat empty box case : 3 people arrested

23-05-2018

ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಮನಗೂಳಿ ಬಳಿ ವಿವಿ ಪ್ಯಾಟ್‌ ಖಾಲಿ ಬಾಕ್ಸ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ವಿವಿ ಪ್ಯಾಟ್ ಖಾಲಿ ಬಾಕ್ಸ್ ಸಿಕ್ಕ ಶೆಡ್ ಅನ್ನು ಲೀಸ್ ಪಡೆದಿದ್ದ ನಿರ್ಮಾಣ ಕಂಪನಿಯ ಮ್ಯಾನೇಜರ್ ಮತ್ತು ಇಬ್ಬರು ಕಾರ್ಮಿಕರನ್ನು ಬಂಧಿಸಲಾಗಿದೆ.

ಸರ್ಜನ್ ಇನ್ಫ್ರಾಕಾಂ ಕಂಪನಿಯ ಮ್ಯಾನೇಜರ್, ಗುಜರಾತ್ ಮೂಲದ ಚಿಮನಭಾಯಿ ಪಟೇಲ, ಬಿಹಾರ ಮೂಲದ ಕಾರ್ಮಿಕರಾದ ಹರೀಂದ್ರ ಭಾಯಿ ಸಾಹನಿ ಮತ್ತು ರಾಜೇಶ್ವರ ಪಾಸ್ವಾನ ಎಂಬುವರು ಬಂಧಿತರು. ಈ ಕುರಿತು ತನಿಖೆ ನಡೆಸಲು ವಿಜಯಪುರ ಡಿವೈಎಸ್ಪಿ ಅಶೋಕ ಅವರನ್ನು ನೇಮಕ ಮಾಡಲಾಗಿದ್ದು, ಇಂಥಹ ಬಾಕ್ಸ್ ಗಳನ್ನು ತಯಾರಿಸುವ ಗುಜರಾತ ಮೂಲದ ಕಂಪನಿಗೆ ವಿಚಾರಣೆಗಾಗಿ ವಿಜಯಪುರ ಪೊಲೀಸರ ತಂಡ ತೆರಳಿದೆ ಎಂದು ತಿಳಿದು ಬಂದಿದೆ.


ಸಂಬಂಧಿತ ಟ್ಯಾಗ್ಗಳು

VV pat Machine ಮ್ಯಾನೇಜರ್ ಡಿವೈಎಸ್ಪಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


H G g. J. D. O
  • Ghgh
  • Professional
Hdhhdhdlfngfhrkmdkfbdka
  • Gggggggggggggttgggujl
  • Professional