'ಇದು ತುಂಬಾ ಸಂತಸದ ದಿನ’-ಪರಂ23-05-2018

ಬೆಂಗಳೂರು: ಇಂದು ಹೆಚ್.ಡಿ ಕುಮಾರ ಸ್ವಾಮಿ ಅವರೊಂದಿಗೆ ನಿಯೋಜಿತ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಹಿನ್ನೆಲೆಯಲ್ಲಿ ಪರಮೇಶ್ವರ್ ‌ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಸದಾಶಿವ ನಗರದ ನಿವಾಸದ ಬಳಿ ಬೆಳಗ್ಗಿನಿಂದಲೇ ಕಾರ್ಯಕರ್ತರು, ಮುಖಂಡರು ಹೂಗುಚ್ಛ ನೀಡಿ ಶುಭಾಶಯ ಕೋರುತ್ತಿದ್ದರು.

ಈ ವೇಳೆ ಮಾತನಾಡಿದ ಪರಮೇಶ್ವರ್ 'ಇಂದು ನನಗೆ ತುಂಬಾ ಸಂತಸದ ದಿನ, ಹೈಕಮಾಂಡ್ ಆಶೀರ್ವಾದದಿಂದ ಅವಕಾಶ ಸಿಕ್ಕಿದೆ. ಜನರ ಪ್ರೀತಿ‌ ವಿಶ್ವಾಸಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಮುಖ್ಯವಾಗಿ ಕೊರಟಗೆರೆ ಕ್ಷೇತ್ರದ ಜನರಿಗೆ ಕೃತಜ್ಞತೆ ಸಲ್ಲಿಸುವೆ' ಎಂದರು.

ಇನ್ನು ಮುಂದೆ ಜನಪರ ಕೆಲಸಕ್ಕೆ ಹೆಚ್ಚಿನ ಒತ್ತು ನೀಡುತ್ತೇನೆ, ನಮಗೆ ಸ್ಪಷ್ಟ ಬಹುಮತ ಬರಲಿಲ್ಲ. ಇದು ಅಲ್ಪಾಯುಷಿ ‌ಸರ್ಕಾರ ಎಂದು ಹೇಳುತ್ತಿದ್ದಾರೆ. 25ರಂದು ಗೊತ್ತಾಗಲಿದೆ ನಮ್ಮದು ಬಹುಮತ ಸರ್ಕಾರ ಎಂಬುದು. ಖಾತೆಗಳ ಹಂಚಿಕೆ ಬಗ್ಗೆ ಇನ್ನು ಚರ್ಚೆಯಾಗಿಲ್ಲ, ಮೊದಲು ಬಹುಮತ ಸಾಬೀತಾಗಬೇಕು, ಬಹುಮತ ಸಾಬೀತು ಬಳಿಕ ದೆಹಲಿಗೆ ತೆರಳುತ್ತೇವೆ, 25ರಂದು ಸಚಿವ ಸ್ಥಾನಗಳ ಬಗ್ಗೆ ಚರ್ಚೆಯಾಗಲಿದೆ ಎಂದು ತಿಳಿಸಿದರು. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಲಿದ್ದು, ನನಗಿಂತ ಸಮರ್ಥರನ್ನ ಪಕ್ಷ ಆಯ್ಕೆ ಮಾಡಿ ಅಧಿಕಾರ ನೀಡಲಿದೆ ಎಂದರು.


ಸಂಬಂಧಿತ ಟ್ಯಾಗ್ಗಳು

G.Parameshwara DCM ರಾಜೀನಾಮೆ ಕೆಪಿಸಿಸಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ