ಮೈತ್ರಿ ಸಂಪುಟಕ್ಕೆ 22-12ರ ಸೂತ್ರ!

congress-Jds: 22-12 formula for karnataka cabinet

23-05-2018

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಸಚಿವ ಸ್ಥಾನ ಹಂಚಿಕೆ, ಕೊಡುಕೊಳ್ಳುವಿಕೆ ಹೊಯ್ದಾಟಕ್ಕೆ ಕೊನೆಗೂ ತೆರೆಬಿದ್ದಿದೆ. ಕಾಂಗ್ರೆಸ್-ಜೆಡಿಎಸ್ ನಡುವೆ 22-12ರ ಹಂಚಿಕೆ ಸೂತ್ರ ಅನುಸರಿಸಲು ಎರಡೂ ಪಕ್ಷದ ಮುಖಂಡರು ತೀರ್ಮಾನಿಸಿದ್ದಾರೆ. ಈ ಕುರಿತು ನಡೆದ ದೀರ್ಘಕಾಲ ಸಭೆಯಲ್ಲಿ ಮಂತ್ರಿ ಸ್ಥಾನ, ಪ್ರಮಾಣ ವಚನ ಕಾರ್ಯಕ್ರಮ ಕುರಿತು ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಂಡಿದ್ದಾರೆ.

ನಿರ್ಣಯ ಕೈಗೊಂಡಿರುವ ಸಚಿವ ಸಂಪುಟ ಸೂತ್ರ ಹೀಗಿದೆ. ಡಿಸಿಎಂ ಸೇರಿ 22 ಸಚಿವ ಸ್ಥಾನ ಕಾಂಗ್ರೆಸ್‌ಗೆ ನೀಡಲಿದ್ದು, ಜೆಡಿಎಸ್ ಗೆ ಸಿಎಂ ಸೇರಿ 12 ಸ್ಥಾನ. ಹಾಗೆಯೇ ಸ್ಪೀಕರ್ ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟು, ಉಪ ಸಭಾಧ್ಯಕ್ಷ ಸ್ಥಾನ ಜೆಡಿಎಸ್ ಪಡೆದುಕೊಂಡಿದೆ.

ಆರಂಭದಲ್ಲಿ ಕಾಂಗ್ರೆಸ್ 20 ಸ್ಥಾನ, 14 ಜೆಡಿಎಸ್‌ಗೆ ಎಂಬ ಚರ್ಚೆ ನಡೆದಿತ್ತಾದರೂ ಅಂತಿಮವಾಗಿ ಎರಡು ಹೆಚ್ಚುವರಿ ಸ್ಥಾನ ಬಿಟ್ಟು ಕೊಡಲು ಹೆಚ್.ಡಿ.ಕುಮಾರಸ್ವಾಮಿ ಒಪ್ಪಿಗೆ ನೀಡಿದ್ದಾರೆ.

ಇದೇ ವೇಳೆ ಕುಮಾರ ಸ್ವಾಮಿ ಒಬ್ಬರೇ ಪದಗ್ರಹಣ ಮಾಡಿದರೆ ಕಾರ್ಯಕ್ರಮ ಜೆಡಿಎಸ್ ಮಯವಾಗಬಹುದು, ಕಾರ್ಯರ್ತರು ಸಹ ಕಡಿಮೆ ಸಂಖ್ಯೆಯಲ್ಲಿ ಬರುವ ಸಾಧ್ಯತೆಗಳಿದ್ದು, ಸಭೆಯಲ್ಲಿ ನಿರ್ಧಾರ ಬದಲಿಸಲಾಗಿ ಕುಮಾರ ಸ್ವಾಮಿ ಅವರೊಂದಿಗೆ ಕಾಂಗ್ರೆಸ್ ನ ಡಾ.ಜಿ ಪರಮೇಶ್ವರ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.   

ರಮೇಶ್ ಕುಮಾರ್ ಸ್ಪೀಕರ್: ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ಹಿರಿಯ ರಾಜಕಾರಣಿ, ಶ್ರೀನಿವಾಸಪುರ ಶಾಸಕ ರಮೇಶ್ ಕುಮಾರ್ ಅವರನ್ನು ಕಾಂಗ್ರೆಸ್ ಆಯ್ಕೆ ಮಾಡಿದೆ. ಕುಮಾರಸ್ವಾಮಿಯವರು ಬಹುಮತ ಸಾಬೀತು ಪಡಿಸಬೇಕಾದ ವಿಧಾನಸಭೆ ಅಧಿವೇಶನದಲ್ಲಿ ರಮೇಶ್ ಕುಮಾರ್ ಅವರು ಸ್ಪೀಕರ್ ಆಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಮೊದಲು ಸ್ಪೀಕರ್ ಸ್ಥಾನಕ್ಕೆ ಒಪ್ಪದಿದ್ದ ರಮೇಶ್ ಕುಮಾರ್ ನಂತರದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಮನವೊಲಿಸಿದ್ದಾರೆ ಎಂದು ತಿಳಿದು ಬಂದಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ