ಅನುರಾಗ್ ತಿವಾರಿಯ ನಿಗೂಢ ಸಾವು ಪ್ರಕರಣಕ್ಕೆ ಹೊಸ ಟ್ವಿಸ್ಟ್ !

Kannada News

24-05-2017

ಐ.ಎ.ಎಸ್ ಅಧಿಕಾರಿ ಅನುರಾಗ ತಿವಾರಿಯ ಅವರ ನಿಗೂಢ ಸಾವು ಪ್ರಕರಣಕ್ಕೆ, ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.
ಮರಣೋತ್ತರ ಪರೀಕ್ಷೆಯ ಪ್ರಥಮ ವರದಿಯಿಂದ ಇದೊಂದು ಅಸಹಜ ಸಾವು ಎಂದು ತಿಳಿದುಬಂದಿದೆ.ಉತ್ತರ ಪ್ರದೇಶದ ಲಖ್ನೊ ಜಿಲ್ಲಾ ಅಸ್ಪತ್ರೆಯ ವೈದ್ಯರ ತಂಡದಿಂದ ಅನುರಾಗ ತಿವಾರಿ ಅವರ ಸಾವು ಉಸಿರು ಗಟ್ಟಿಸಿರುವುದು, ಹಾಗೂ ದೇಹದ ಮೇಲೆ ಅರು ಕಡೇ ಗಾಯವಾಗಿತ್ತು ಅಲ್ಲದೆ ಮುಖದ ಮೇಲೆ ಮೂರು ಕಡೇ ಗಾಯವಾಗಿತ್ತು, ಎಂದು ಇದು ಸಹಜ ಸಾವಲ್ಲ ಇದು ವ್ಯವಸ್ಥಿತವಾಗಿ ರೂಪಿಸಿರುವ ಕೂಲೆ ಎಂದು ವರದಿ ನೀಡಿರುವುದು ಇಗ ತಿವಾರಿಯವರ ಸಾವಿಗೆ ಹೂಸ ತಿರುವು ಸಿಕ್ಕೆದೆ. ಅನುರಾಗ ತಿವಾರಿ ಅವರ ಸಾವಿಗೆ ಕಾಂಗ್ರೆಸ್ ಪಕ್ಷದ ಬೆಂಗಳೂರಿನ  ಶಾಸಕರೂಬ್ಬರ ಹೆಸರು ಕೇಳಿ ಬರುತ್ತಿದೆ. ತಿವಾರಿ ಅವರು ಅಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಯುಕ್ತರಾಗಿದ್ದ ಇವರು ಇಲಾಖೆಯಲ್ಲಿ ಪಡಿತರ ಚೀಟಿಯ ವಿತರಣೆ ಮಾಡುವ ಹೋಮೆಟ್ ಕಂಪನಿಯವರು ಅವ್ಯವಹಾರ ಸಂಬಂಧಿಸಿದಂತೆ 159 ಕೋಟಿ ದುರುಪಯೋಗವಾಗಿದೆ. ಇದರ ಸಂಬಂಧ ಸಿಬಿಐ ತನಿಖೆಗೆ ಒಪ್ಪಿಸುವುದು ಹಾಗೂ ಪ್ರಧಾನ ಮಂತ್ರಿ ಮೋದಿಯವರಿಗೆ ಪತ್ರ ಬರೆಯಲು ಸಿದ್ಧತೆ ನಡೆಸಿದ್ದರು. ಅಲ್ಲದೆ ಡೂಡ್ಡ ಹಗರಣದಲ್ಲಿ ಇಲಾಖೆ ಸಾಕಷ್ಟು ಅಧಿಕಾರಿಗಳು ಇದರಲ್ಲಿ ಶಾಮೀಲಾಗಿರುವ ಬಗ್ಗೆ ತಿವಾರಿಯವರು ಅನುಮಾನ ವ್ಯಕ್ತಪಡಿದ್ದರು. ಅಷ್ಟರಲ್ಲಿ ಅವರ ಪ್ರತಿಯೊಂದು ಕಾರ್ಯಗಳ ಬಗ್ಗೆ ನಿಗಾವಹಿಸಲಾಗಿತ್ತು ಎಂಬ ಅಂಶ ಎಸ್ ಐ ಟಿ ತಂಡಕ್ಕೆ ಲಭ್ಯವಾಗಿದೆ.
ತಿವಾರಿ ಅವರು ಬೆಳಗಿನ ಸಮಯದಲ್ಲಿ ವಾಕಿಂಗ್ ಹೋಗುತ್ತಿರಲಿಲ್ಲ ಅದರೆ ಅಂದು ಹೊರಗಡೆ ಏಕೆ ಹೋದರು. ತಿವಾರಿಯವರು ಕೂಲೆಯಾಗುವ ಹಿಂದಿನ ರಾತ್ರಿ ಇವರು ಯಾರ ಜೂತೆ ಊಟ ಮಾಡಿದ್ದರು. ಅವರ ಜೂತೆ ನಿರಂತರ ಸಂಪರ್ಕ ಇತ್ತು. ಕರ್ನಾಟಕದ ಮೂಲಕ ಉತ್ತರ ಪ್ರದೇಶ ಸುಪಾರಿ ಗ್ಯಾಂಗ್ ಸುಪಾರಿ ಕೊಟ್ಟು ನಿಗೂಢ ವಾಗಿ ಕೂಲೆ ಮಾಡಿಸಿದ್ದಾರೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ ಲಖ್ನೊ ಪೋಲಿಸರು ತಿವಾರಿ ಅವರ ಕೊಲೆಯಾದ ದಿನ ಸಮರ್ಪಕವಾಗಿ ತನಿಖೆ ನಡೆಸಿಲ್ಲ ಎಂದು ಅವರ ತಾಯಿ ಹಾಗೂ ಸಹೋದರ ಆರೋಪ ಮಾಡಿದ್ದರು. 
ಇಂದು ಲಖ್ನೊ ವೈದ್ಯರ ತಂಡ ವೈದ್ಯಕೀಯ ಪರೀಕ್ಷೆಯ ವರದಿಯಲ್ಲಿ ಕೊಲೆ ಎಂಬ ವರದಿ ಹೂರ ಬರುತಿದ್ದಂತೆ, ಅಹಾರ ಮತ್ತು  ನಾಗರೀಕ ಸರಬರಾಜು ಇಲಾಖೆಯ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ.
 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ