ರೈತರ ಸಾಲಮನ್ನಾಕ್ಕೆ ಹೆಚ್ಚಿದ ಒತ್ತಡ!

Pressure fo farmres loan wavier!

22-05-2018

ಬೆಂಗಳೂರು: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ಜೆಡಿಎಸ್ ಶಾಸಕಾಂಗ ನಾಯಕ ಹೆಚ್.ಡಿ. ಕುಮಾರ ಸ್ವಾಮಿ ಅವರ ಮೇಲೆ ಇದೀಗ ರೈತರ ಸಾಲ ಮನ್ನಾ ಮಾಡುವಂತೆ ದಶ ದಿಕ್ಕುಗಳಿಂದಲೂ ಒತ್ತಡ ಕೇಳಿ ಬರುತ್ತಿದೆ. ಅಧಿಕಾರಕ್ಕೆ ಬಂದ 24ಗಂಟೆಗಳಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ನೀಡಿದ್ದ ಭರವಸೆ ಈಡೇರಿಸುವಂತೆ ಎಲ್ಲೆಡೆಯಿಂದ ಜೋರಾದ ಆಗ್ರಹ ವ್ಯಕ್ತವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳದಲ್ಲಿಂದು ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಿಯೋಜಿತ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ, ವಿಧಾನಸಭಾ ಚುನಾವಣೆಗೆ ಜೆಡಿಎಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಲಾಗಿದ್ದ ಭರವಸೆಗಳ ಪೈಕಿ ಪ್ರಮುಖವಾದ ರೈತರ ಸಂಪೂರ್ಣ ಸಾಲ ಮನ್ನಾ ವಿಷಯವನ್ನು ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಬಹುಮತ ಸಾಬೀತುಪಡಿಸಿದ ನಂತರ ಸ್ಪಷ್ಟವಾಗಿ ನಿರ್ಧರಿಸಲಾಗುವುದು ಎಂದು ಹೇಳಿದರು.

ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಸಂಪೂರ್ಣ ಬಹುಮತ ದೊರೆತಿದ್ದರೆ ರೈತರ ಸಾಲ ಮನ್ನಾ ಭರವಸೆಯ ಬಗ್ಗೆ ತಾವೊಬ್ಬರೇ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿತ್ತು. ಆದರೆ ಜನಾದೇಶದ ಪ್ರಕಾರ ಈಗ ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರ ರಚನೆಯಾಗುತ್ತಿದ್ದು, ಸಮ್ಮಿಶ್ರ ಸರ್ಕಾರದ ಇತಿಮಿತಿಯಲ್ಲಿ ತಮ್ಮ ಪ್ರಣಾಳಿಕೆಯ ಭರವಸೆಗಳನ್ನು ಈಡೇರಿಸಬೇಕಾಗಿದೆ, ಇದಕ್ಕೆ ರಾಜ್ಯದ ಜನತೆಯ ಸಹಕಾರ ಅಗತ್ಯ ಎಂದರು.

ಈ ಮಧ್ಯೆ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ, ಚುನಾವಣಾ ಪೂರ್ವ ಆಶ್ವಾಸನೆಯಂತೆ ನಿಯೋಜಿತ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡಬೇಕು ಇಲ್ಲದಿದ್ದರೆ ಪ್ರಣಾಳಿಕೆಯಲ್ಲಿನ ಅವರ ಭರವಸೆ ಹುಸಿಯಾಗಲಿದೆ ಎಂದು ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದರು.

ಜೆಡಿಎಸ್ ಚುನಾವಣಾ ಪ್ರಣಾಳಿಕೆ ಕೇವಲ ಬೋಗಸ್ ಆಗಿದ್ದು, ಕುಮಾರಸ್ವಾಮಿ ಒಬ್ಬ ಅವಕಾಶವಾದಿ ರಾಜಕಾರಣಿ ಎಂದು ದೂರಿದರು. ಸದ್ಯದಲ್ಲೇ ಅಧಿಕಾರಕ್ಕೆ ಬರಲಿರುವ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಎಷ್ಟು ದಿನ ನಡೆಯುತ್ತದೆ ಎನ್ನುವ ಖಾತರಿ ಇಲ್ಲ. ಈ ಮೈತ್ರಿಕೂಟ ಭಿನ್ನಾಭಿಪ್ರಾಯಗಳ ಆಗರವಾಗಲಿದೆ ಎಂದು ಅವರು ಭವಿಷ್ಯ ನುಡಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದಶಿ ಸಿ.ಟಿ. ರವಿ ಮಾತನಾಡಿ, ಸಾಲ ಮನ್ನಾ ಕುರಿತು ಕುಮಾರ ಸ್ವಾಮಿ ಅವರು ನೀಡಿರುವ ಹೇಳಿಕೆ ಆತಂಕ ಸೃಷ್ಟಿಸಿದೆ. ಜೆಡಿಎಸ್‍ಗೆ ಪೂರ್ಣ ಜನಾದೇಶ ದೊರೆತಿದ್ದರೆ ನಿರ್ಧಾರ ತೆಗೆದುಕೊಳ್ಳಬಹುದಿತ್ತು ಎಂದು ಹೇಳುವ ಮೂಲಕ ಪಲಾಯನ ಮಾಡುತ್ತಿದ್ದಾರೆ. ಅಲ್ಲದೆ, ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸಿ ಹಗರಣ ನಡೆಸಿದವರನ್ನು ಜೈಲಿಗೆ ತಳ್ಳುತ್ತೇನೆ ಎಂದಿದ್ದ ಕುಮಾರಸ್ವಾಮಿ ಈ ಮೌನ ತಳೆದಿದ್ದಾರೆ. ಚುನಾವಣಾ ಪ್ರಣಾಳಿಕೆಗೆ ಮತ್ತುಚುನಾವಣೆ ವೇಳೆ ಕೊಟ್ಟ ಮಾತಿಗೆಕುಮಾರಸ್ವಾಮಿ ಬದ್ಧರಾಗಿಲ್ಲ. ಕುರ್ಚಿ ಸಿಗುತ್ತಿದ್ದಂತೆ ಎಲ್ಲವನ್ನೂ ಮರೆತಿದ್ದಾರೆ ಎಂದರು.

ರೈತ ಸಂಘದ ಅದ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಈ ನಡುವೆ ದೇಶದಲ್ಲಿ ಕಳೆದ 70 ವರ್ಷಗಳಿಂದ ರೈತರನ್ನು ಕಡೆಗಣಿಸಲಾಗಿದೆ. ಇದರಿಂದಾಗಿಯೇ ರೈತ ಸಮುದಾಯದ ಸಂಕಷ್ಟಗಳು ವಿಪರೀತವಾಗಿದ್ದು, ಅನ್ನದಾತನ ಹಿತರಕ್ಷಣೆಗೆ ಯಾವುದೇ ಪಕ್ಷದ ಸರ್ಕಾರವಾದರೂ ಮೊದಲ ಆದ್ಯತೆ ನೀಡಬೇಕಾಗದ ಅನಿವಾರ್ಯದತೆ ಇದೆ ಎಂದರು.

ಸದ್ಯದಲ್ಲೇ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯಲಿರುವ ಎಚ್.ಡಿ. ಕುಮಾರಸ್ವಾಮಿ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳ ಮೇಲೆ ರೈತ ಸಮುದಾಯ ಭಾರೀ ನಿರೀಕ್ಷೆ ಹೊಂದಿದ್ದು, ಈ ಭರವಸೆಗಳನ್ನು ಈಡೇರಿಸಬೇಕು ಎನ್ನುವುದು ರೈತರ ಒತ್ತಾಸೆಯಾಗಿದೆ ಎಂದು ಅವರು ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Farmers kodihalli chandrashe ಸಾಲ ಮನ್ನಾ ಬಹುಮತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ನಾನು ನಿಮ್ಮ ಸುದ್ದಿವಾಹಿನಿಯ ದಿನನಿತ್ಯದ ಓದುಗ, ನಿಮ್ಮ ಬರವಣಿಗೆಯ ಸುದ್ದಿಗಳು ಮಾಹಿತಿಗಳು ಸೂಕ್ಷ್ಮವಾಗಿರುತ್ತದೆ ಮತ್ತು ಯಾವುದೇ ಓದುಗನಿಗೆ ಹತ್ತಿರವಾಗುವಂತಿರುತ್ತದೆ, ಇನ್ನೂ ಮಾಹಿತಿಗಳ ಲೇಖನಗಳನ್ನು ಪ್ರಕಟಿಸಿ. ಧನ್ಯವಾದಗಳು - itskannada
  • satishraj
  • reader