ಅಪಘಾತ: ಉದ್ಯಮಿಗೆ ಗುಂಡಿಕ್ಕಿದ ದುಷ್ಕರ್ಮಿಗಳು

car accident: shootout in quarrel!

22-05-2018

ಬೆಂಗಳೂರು: ಕಾರು ಡಿಕ್ಕಿ ಹೊಡೆದ ನಂತರ ನಡೆದ ಜಗಳ ವಿಕೋಪಕ್ಕೆ ತಿರುಗಿ ಸೋಫಾ ಅಂಗಡಿ ಮಾಲೀಕನ ಮೇಲೆ ಗುಂಡು ಹಾರಿಸಿ ಪರಾರಿಯಾಗಿರುವ ದುಷ್ಕರ್ಮಿಯ ಸುಳಿವು ಪತ್ತೆ ಹಚ್ಚಿರುವ ಪೂರ್ವ ವಿಭಾಗದ ಪೊಲೀಸರು ಆತನ ಬಂಧನಕ್ಕಾಗಿ ತೀವ್ರ ಶೋಧ ನಡೆಸಿದ್ದಾರೆ.

ಗುಂಡೇಟು ತಗುಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫ್ರೇಜರ್ ಟೌನ್‍ನ ಮಸೂದ್ ಅಲಿ(40) ಪ್ರಾಣಾಪಾಯದಿಂದ ಪಾರಾಗಿದ್ದಾರೆ, ಏಕೆಂದರೆ ಗುಂಡು ಅವರ ಬೆನ್ನನ್ನು ಸವರಿಕೊಂಡು ಹೋಗಿರುವುದರಿಂದ ಹೆಚ್ಚಿನ ಗಾಯವಾಗಿಲ್ಲ ಹೀಗಾಗಿ ಚಿಕಿತ್ಸೆಯ ಅವಶ್ಯಕತೆ ಇಲ್ಲದಿರುವುದರಿಂದ ಅವರನ್ನು ಸಂಜೆ ವೇಳೆಗೆ ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗುತ್ತದೆ.

ಪುಲಿಕೇಶಿನಗರದ ಅಲಾಯಿ ರಸ್ತೆಯಲ್ಲಿ ನಿನ್ನೆ ಮಧ್ಯಾಹ್ನ ಮಸೂದ್ ಅಲಿ ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ಮತ್ತೊಂದು ಕಾರ್ ಡಿಕ್ಕಿ ಹೊಡೆದಿದೆ. ಆಗ ಮಸೂದ್ ಅಲಿ ಕಾರಿನಿಂದ ಕೆಳಗಿಳಿದು ಡಿಕ್ಕಿ ಹೊಡೆದವರ ಜತೆ ಜಗಳಕ್ಕೆ ನಿಂತಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿದಾಗ ದುಷ್ಕರ್ಮಿಯೊಬ್ಬ ಪಿಸ್ತೂಲ್‍ನಿಂದ ಮಸೂದ್ ಅಲಿ ಬೆನ್ನಿಗೆ ಗುಂಡಿಕ್ಕಿದ್ದು ಜನ ಸೇರ ತೊಡಗಿದಂತೆ ಕಾರಿನಲ್ಲಿದ್ದವರ ಜೊತೆ ಪರಾರಿಯಾಗಿದ್ದಾನೆ.

ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪುಲಿಕೇಶಿನಗರ ಪೊಲೀಸರು ಗುಂಡಿಕ್ಕಿ ಪರಾರಿಯಾದ ದುಷ್ಕರ್ಮಿಗಳ ಕಾರು ಸಿಸಿಟಿವಿಯಲ್ಲಿ ಸೆರೆಯಾಗಿರುವುದನ್ನು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಕೃತ್ಯವೆಸಗಿದ ದುಷ್ಕರ್ಮಿ ಪತ್ತೆಗಾಗಿ ಬಲೆ ಬೀಸಿದ್ದಾರೆ. ಕೆಎ 51, ಪಿ-9826 ನಂಬರ್‍ ನ  ಕಾರಿನಲ್ಲಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಅಸಲಿಗೆ ಈ ನಂಬರ್ ರಿಜಿಸ್ಟ್ರೇಷನ್ ಹೊಂದಿರುವ ಕಾರು ಮಾರುತಿ ಕಂಪನಿಯ ರಿಟ್ಜ್ ಕಾರಾಗಿದ್ದು, ದುಷ್ಕರ್ಮಿಗಳು ಕಾರಿನ ನಂಬರ್ ಪ್ಲೇಟ್ ಬದಲಿಸಿರುವ ಸಾಧ್ಯತೆ ಇದೆ ಎಂದು ತನಿಖೆ ವೇಳೆ ತಿಳಿದುಬಂದಿದೆ.

ಗುಂಡು ಮಸೂದ್ ಅಲಿ ಅವರ ಬೆನ್ನನ್ನು ಸವರಿಕೊಂಡು ಹೋಗಿರುವುದರಿಂದ ಹೆಚ್ಚಿನ ಆಪಾಯ ಸಂಭವಿಸಿಲ್ಲ ಹಳೇ ದ್ವೇಷದಿಂದ ಈ ಘಟನೆ ನಡೆದಿಲ್ಲ ಎಂದು ಮಸೂದ್ ಅಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್‍ಕುಮಾರ್ ಸಿಂಗ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Gun shoot ಚಿಕಿತ್ಸೆ ಆಸ್ಪತ್ರೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Shsjsjsj
  • shsjsj
  • Professional
Snsjsj
  • shsjsj
  • Professional
Fhjkofds
  • dbsjsj5789
  • Professional