ನಿಫಾ ವೈರಸ್: ಕೇರಳ-ಕರ್ನಾಟಕ ಗಡಿಯಲ್ಲಿ ಕಟ್ಟೆಚ್ಚರ

Nipah virus: high protection and alert in kerala-karnataka Border

22-05-2018

ಬೆಂಗಳೂರು: ಕೇರಳದಲ್ಲಿ ಬಾವಲಿಗಳಿಂದ ಹರಡುತ್ತಿದೆ ಎಂದು ಶಂಕಿಸಲಾಗಿರುವ ನಿಫಾ ವೈರಸ್ ಕರ್ನಾಟಕಕ್ಕೂ ಹರಡುವ ಭೀತಿ ಎದುರಾಗಿದೆ. ಕೇರಳ-ಕರ್ನಾಟಕ ಗಡಿಯಲ್ಲಿ ನಿಫಾ ವೈರಸ್ ಕುರಿತು ಹೆಚ್ಚಿನ ಕಟ್ಟೆಚ್ಚರ ವಹಿಸಲಾಗಿದೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯ ಕೇರಳ ಗಡಿಯಲ್ಲಿ, ಜಿಲ್ಲೆಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ವಹಿಸಿದ್ದಾರೆ ಎಂದು ತಿಳಿದು ಬಂದಿದೆ. ಗುಂಡ್ಲುಪೇಟೆಗೆ ಪ್ರತಿನಿತ್ಯ ಸಾವಿರಾರು ಕೇರಳಿಗರು ಆಗಮಿಸುವ ಹಿನ್ನೆಯಲ್ಲಿ ನಿಫಾ ವೈರಸ್ ಹರಡುವ ಭೀತಿ ಎದುರಾಗಿದೆ. ಗುಂಡ್ಲುಪೇಟೆಯ ಹೊಟೇಲ್ ಹಾಗೂ ಟೀ ಸ್ಟಾಲ್ ಗಳ ಮೇಲೆ ನಿಗಾ ಇಟ್ಟಿದ್ದಾರೆ. ಅಲ್ಲದೇ ಕೇರಳಿಗರು ಕರ್ನಾಟಕಕ್ಕೆ ಬರುವ ಮುನ್ನ ತಪಾಸಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿಫಾ ವೈರಸ್ ಮಹಾ ಮಾರಿಗೆ ಕೇರಳದಲ್ಲಿ 10 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಯಲ್ಲಿ ಕರ್ನಾಟಕಕ್ಕೂ ಹರಡುವ ಸಂಭವವಿದ್ದು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.


ಸಂಬಂಧಿತ ಟ್ಯಾಗ್ಗಳು

Nipah Kerala ಇಲಾಖೆ ಕಟ್ಟೆಚ್ಚರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ