ಬದುಕನ್ನೇ ಕಿತ್ತುಕೊಂಡ ಭಾರೀ ಮಳೆ

Heavy Rain :silk farm destroyed

22-05-2018

ಮೈಸೂರು: ತನ್ನ ತಂದೆ-ತಾಯಿ ಜೀವನಕ್ಕೆ ಅನುಕೂಲವಾಗಲೆಂದು ರೇಷ್ಮೆಹುಳು ಸಾಕಾಣಿಕೆಗೆ ನಿರ್ಮಿಸಿಕೊಟ್ಟಿದ್ದ ಮನೆ ಭಾರೀ ಬಿರುಗಾಳಿ ಸಹಿತ ಮಳೆಗೆ ಮತ್ತು ಸಿಡಿಲ ಹೊಡೆತಕ್ಕೆ  ಸಂಪೂರ್ಣ ಧ್ವಂಸವಾಗಿದೆ. ಘಟನೆ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕು ಕಸಬಾ ಹೋಬಳಿ ಕಾಳೇಗೌಡನಕೊಪ್ಪಲು ಎಂಬ ಗ್ರಾಮದಲ್ಲಿ ನಿನ್ನೆ ತಡ ರಾತ್ರಿ ನಡೆದಿದೆ.

ಭಾರತೀಯ ಸೇನೆಯಲ್ಲಿ ಯೋಧನಾಗಿ ಅರುಣಾಚಲ ಗಡಿ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವ ಕೆ.ಜೆ.ಸತೀಶ್ ಎಂಬುವರು ತನ್ನ ತಂದೆ-ತಾಯಿಯ ಜೀವನೋಪಾಯಕ್ಕಾಗಿ ತಾನು ಕಷ್ಟಪಟ್ಟು ಕೂಡಿಟ್ಟಿದ್ದ ಹಣದಲ್ಲಿ ರೇಷ್ಮೆಹುಳು ಸಾಕಾಣಿಕೆಗೆ ವ್ಯವಸ್ಥೆ ಮಾಡಿಕೊಟ್ಟಿದ್ದರು. ಆದರೆ ಸಿಡಿಲ ಸಹಿತ ಭಾರೀ ಮಳೆ ತಮ್ಮ ಬದುಕನ್ನೇ ಅತಂತ್ರವಾಗಿಸಿದೆ. 

ಘಟನೆಯಲ್ಲಿ ಮನೆಯ ಮಾಲೀಕ ಕೃಷಿಕ ಜವರೇಗೌಡರು ಸಿಡಿಲು ಬಡಿತದಿಂದ ಗಾಯಗೊಂಡಿದ್ದಾರೆ. ನಿನ್ನೆ ರಾತ್ರಿ ಸುರಿದ ಭಾರೀ ಬಿರುಗಾಳಿ ಸಹಿತ ಮಳೆ ಹಾಗೂ ಸಿಡಿಲಿನ ರಭಸಕ್ಕೆ ಮನೆಯ ಮೇಲ್ಚಾವಣಿಯು ಹಾರಿಹೋಗಿದೆ. ರೇಷ್ಮೆ ಹುಳು ಸಾಕಾಣಿಕೆ ಮನೆಯು ಸಂಪೂರ್ಣ ದ್ವಂಸವಾಗಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.


ಸಂಬಂಧಿತ ಟ್ಯಾಗ್ಗಳು

Silk Rain ಮಾಲೀಕ ಕೃಷಿಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ