ಶಾರ್ಟ್ ಸರ್ಕ್ಯೂಟ್: ಫೋಟೋ ಸ್ಟುಡಿಯೋ ಬೆಂಕಿಗಾಹುತಿ

short circuit at photo studio: totally collapsed with fire

22-05-2018

ಶಿವಮೊಗ‌್ಗ: ಶಾರ್ಟ್ ಸರ್ಕ್ಯೂಟ್ ನಿಂದ ಫೋಟೋ ಸ್ಟುಡಿಯೋಗೆ ಬೆಂಕಿ ಹೊತ್ತಿಕೊಂಡು ಸಂಪೂರ್ಣ ನಾಶವಾಗಿದೆ. ಸಾಗರದ ಫಾರೆಸ್ಟ್ ಕಚೇರಿ ರಸ್ತೆಯ ಶ್ರೀದೇವಿ ಡಿಜಿಟಲ್ ಸ್ಟುಡಿಯೋನಲ್ಲಿ ನಿನ್ನೆ ತಡ ರಾತ್ರಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು, ಸ್ಟುಡಿಯೋ ಒಳಗಿದ್ದ ಎಲ್ಲಾ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿದೆ. ಘಟನೆಯಲ್ಲಿ ಹತ್ತು ಲಕ್ಷ ರೂಪಾಯಿಗೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಸ್ಟುಡಿಯೋ ಮಾಲೀಕ ಶಾಂತಪ್ಪ ಅವರು ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ  ದೂರು ದಾಖಲಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

studio Fire ಶಾರ್ಟ್ ಸರ್ಕ್ಯೂಟ್ ಸಂಪೂರ್ಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ