ಚಲಿಸುತ್ತಿದ್ದ ಆಟೋ ಮೇಲೆ ಉರುಳಿ ಬಿದ್ದ ಮರ

Heavy Rain A Tree fell on auto: one death

22-05-2018

ಮೈಸೂರು: ಚಲಿಸುತ್ತಿದ್ದ ಆಟೋ ಮೇಲೆ ಮರವೊಂದು ಉರುಳಿಬಿದ್ದ ಪರಿಣಾಮ ಅಟೋದಲ್ಲಿದ್ದ ಸಾಫ್ಟ್ವೇರ್ ಎಂಜಿನಿಯರ್ ಒಬ್ಬರು ಸಾವನ್ನಪ್ಪಿದ್ದಾರೆ. ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ನಗರದ ಇಎಸ್ಐ ಆಸ್ಪತ್ರೆ ಸಮೀಪ ಆಟೋ ಮೇಲೆ ಬುಡ ಸಮೇತ ಮರ ಉರುಳಿ ಬಿದ್ದಿದೆ. ದುರ್ಘಟನೆಯಲ್ಲಿ ಮೃತಪಟ್ಟ ಯುವತಿಯನ್ನು ಚೆನ್ನೈನ ಇನ್ಫೋಸಿಸ್ ನಲ್ಲಿ ಉದ್ಯೋಗ ಮಾಡಿಕೊಂಡಿದ್ದ ರೇವತಿ (25) ಎಂದು ಗುರುತಿಸಲಾಗಿದೆ. ಸ್ನೇಹಿತೆಯನ್ನು ನೋಡಲು ಬಂದವಳನ್ನು ಮಳೆ ಬಲಿ ಪಡೆದಿದೆ.

ಮೈಸೂರಿನಲ್ಲಿನ ತನ್ನ ಸ್ನೇಹಿತೆಯನ್ನು ಭೇಟಿ ಮಾಡಲು ಬಂದಿದ್ದ ರೇವತಿ, ಸ್ನೇಹಿತೆ ನೋಡಿಕೊಂಡು ವಾಪಸ್ ರೈಲ್ವೆ ಸ್ಟೇಷನ್ ಗೆ ಬರುವ ವೇಳೆ ದುರಂತ ಸಂಭವಿಸಿದೆ. ಆಟೋದಲ್ಲಿದ್ದ ಮತ್ತೊಬ್ಬ ಯುವತಿ ರೇವತಿ ಸ್ನೇಹಿತೆ ವಾಸವಿ ಗುಪ್ತಾ ಎಂಬುವವರಿಗೂ ಗಂಭೀರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ವಿ.ವಿ.ಪುರಂ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Heavy Rain Engineer ರೈಲ್ವೆ ಸ್ಟೇಷನ್ ದುರ್ಘಟನೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ