‘ಕುಮಾರಸ್ವಾಮಿ ನುಡಿದಂತೆ ನಡೆಯಬೇಕು’- ನಿರಾಣಿ

Ex-minister Murugesh Nirani met yeddyurappa

22-05-2018

ಬೆಂಗಳೂರು: ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ನಿವಾಸಕ್ಕೆ ಮಾಜಿ ಸಚಿವ ಮುರುಗೇಶ್ ನಿರಾಣಿ ಭೇಟಿ ನೀಡಿದ್ದಾರೆ. ಭೇಟಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಸರ್ಕಾರ ರಚನೆಗೆ ಬೆಂಗಳೂರು ನಾಯಕರು ಸಾಥ್ ನೀಡಿಲ್ಲ ಎಂಬ ಆರೋಪದ ವಿಚಾರವಾಗಿ ಪ್ರತಿಕ್ರಿಯಿಸಿ, ಸರ್ಕಾರ ಉಳಿಸಿಕೊಳ್ಳಲು ನಾವೆಲ್ಲ ಒಟ್ಟುಗೂಡಿ ಪ್ರಯತ್ನ ಮಾಡಿದ್ದೇವೆ. ಕೇಂದ್ರ ಸಚಿವರು, ನಾಯಕರು ಅವರ ಸ್ಥಾನಮಾನಕ್ಕೆ ಅನುಗುಣವಾಗಿ ಪ್ರಯತ್ನ ಮಾಡಿದರು. ಮುಂಬರುವ ದಿನಗಳಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಗುರಿ ಇದೆ ಎಂದರು.

ಕುಮಾರಸ್ವಾಮಿ ಪ್ರಮಾಣವಚನಕ್ಕೆ ಸಜ್ಜಾಗುತ್ತಿದ್ದಾರೆ. ಐದು‌ ಜನಕ್ಕಿಂತ ಹೆಚ್ಚು ಡಿಸಿಎಂ, ಸಿಎಂ ಆಗುವಂತವರೇ ಇದ್ದಾರೆ. ಕಾಂಗ್ರೆಸ್‌ ನವರು ಇದನ್ನ ಒಪ್ಪಿಕೊಳ್ಳುವುದು ಕಷ್ಟ ಇದೆ. ರೈತರ ಸಾಲ ಮನ್ನಾ ಮಾಡೋಕೆ ಯಡಿಯೂರಪ್ಪ ಪ್ರಯತ್ನ ಮಾಡಿದ್ದರು. ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡಲಿ. ನಾವು ಅದರಲ್ಲಿ ರಾಜಕೀಯ ಮಾಡಲ್ಲ. ಕುಮಾರಸ್ವಾಮಿ ನುಡಿದಂತೆ ನಡೆಯಬೇಕು ಎಂದಿದ್ದಾರೆ.

ದೇವೇಗೌಡರು ಅನುಭವಿಗಳು, ತಮ್ಮ ಅನುಭವದ ಆಧಾರದ ಮೇಲೆ ಹೇಗೆ ಹಣ ಹೊಂದಿಸಿಕೊಳ್ತಾರೋ ಹೊಂದಿಸಿಕೊಳ್ಳಲಿ. ರಾಜ್ಯದ ರೈತರಿಗೆ ಅನುಕೂಲ ಮಾಡಿಕೊಡಲಿ, ಆದರೆ ಮಾತು ತಪ್ಪಬಾರದು ಎಂದು ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Murugesh Nirani yeddyurappa ಲೋಕಸಭಾ ಸಚಿವರು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ