'ದ್ವೇಷ ರಾಜಕಾರಣಕ್ಕೆ ಆಸ್ಪದ ಕೊಡಬೇಡಿ' -ಹೆಚ್ಡಿಕೆ22-05-2018

ದಕ್ಷಿಣ ಕನ್ನಡ: ನಿಯೋಜಿತ ಮುಖ್ಯಮಂತ್ರಿ ಹೆಚ್.ಡಿ ಕುಮಾರ ಸ್ವಾಮಿ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಫಲಿತಾಂಶ ಬಳಿಕ ಒಂದು ವಾರದಿಂದ ಹಲವಾರು ಘಟನೆಗಳು ನಡೆದಿವೆ. ದೇವರ ಅನುಗ್ರಹ ಮೂಲಕ ರಾಜ್ಯದ ಜವಾಬ್ದಾರಿ ನಿರ್ವಹಿಸಲು ಕಾಂಗ್ರೆಸ್ ವರಿಷ್ಠರು ಅವರ ಪಕ್ಷದ ನಾಯಕರ ಮನವೋಲಿಸಿ ಈ ತೀರ್ಮಾನ ಕೈಗೊಂಡಿದ್ದಾರೆ, ಇದಕ್ಕೆ ಮೂಲ ಕಾರಣ ದೈವ ಪ್ರೇರಣೆ, ಈ ಕಾರಣದಿಂದಾಗಿ ಹಲವಾರು ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ಪಕ್ಷದ ಪ್ರಣಾಳಿಕೆ ಅಂಶಗಳ ಜಾರಿಗೆ ತರಲು ಸರ್ಕಾರದ ಹಣಕಾಸು ಪರಿಸ್ಥಿತಿ ಸಧೃಡವಾಗಲು ದೇವರಲ್ಲಿ ಪ್ರಾರ್ಥಿಸಿದ್ದೇನೆ. ಕರಾವಳಿ ಜನರು ಸಹೋದರ ಮನೋಭಾವದಲ್ಲಿ ಬದುಕಬೇಕು, ಯಾವುದೇ ದ್ವೇಷದ ರಾಜಕಾರಣಕ್ಕೆ ಆಸ್ಪದ ಕೊಡಬೇಡಿ, ಕಾನೂನು ಭಂಗಕ್ಕೆ ಅವಕಾಶ ಕೊಡಬೇಡಿ, ಯಾವುದೇ ಸಮಸ್ಯೆ ಇದ್ದರೆ ನನ್ನನ್ನು ಸಂಪರ್ಕಿಸಿ, ಶಾಂತಿ ಕದಡುವ ಜನರ ಬಗ್ಗೆ ಎಚ್ಚರಿಕೆ ವಹಿಸಿ ಎಂದರು.

ಕಾಂಗ್ರೆಸ್ ಜೊತೆ ಮೈತ್ರಿ ಮಾಡಿರೋದು ಅಪವಿತ್ರ ಅಂತಾರೆ, ಶಾಸಕರ ಬಹುಮತ ಇರುವವರೆಗೆ ಸರ್ಕಾರ ನಡೆಯುತ್ತದೆ, ಇದರಲ್ಲಿ ಪವಿತ್ರ-ಅಪವಿತ್ರ ಅನ್ನೋಕ್ಕಾಗಲ್ಲ. ಮಂತ್ರಿ ಮಂಡಲ ಗೊಂದಲ ವಿಚಾರ ಮಾಧ್ಯಮದ ಕಟ್ಟು ಕಥೆ,  ಈ ಬಗ್ಗೆ ಚರ್ಚೆ ಇನ್ನೂ ಪಕ್ಷದಲ್ಲಿಯೇ ನಡೆದಿಲ್ಲ. ಐದು ವರ್ಷ ಸುಭದ್ರ ಸರ್ಕಾರ ನಮ್ಮ ಮೊದಲ ಆದ್ಯತೆ, ಇಂದು ಮಧ್ಯಾಹ್ನ ಸಭೆ ಮಾಡಲಿದ್ದೇವೆ, ಕಾಂಗ್ರೆಸ್ ನಾಯಕರ ವಿಶ್ವಾಸ ಪಡೆದುಕೊಂಡೇ ಕೆಲಸ ಮಾಡುತ್ತೀವಿ ಎಂದರು.

ಎತ್ತಿನ ಹೊಳೆ ಯೋಜನೆ ಹೆಸರಿನ ಅಕ್ರಮ ತಡೆಯುತ್ತೇನೆ ಎಂದಿದ್ದೆ, ಪ್ರಕೃತಿ ವಿನಾಶ ಮಾಡಲು ಬಿಡುವುದಿಲ್ಲ, ಎತ್ತಿನಹೊಳೆ ಯೋಜನೆ ತಡೆಯುತ್ತೀನಿ ಅಂದಿಲ್ಲ ಎಂದರು.


ಸಂಬಂಧಿತ ಟ್ಯಾಗ್ಗಳು

H.D Kumaraswamy yettina hole ಅಪವಿತ್ರ ವಿಶ್ವಾಸ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ