ಭಾರತೀಯ ಮಹಿಳೆಗೆ ಸುರಕ್ಷಿತ ವಾಪಸಾತಿಗೆ ಇಸ್ಲಾಮಾಬಾದ್ ಹೈಕೋರ್ಟ್ ಅನುಮತಿ !

Kannada News

24-05-2017

ಪಾಕಿಸ್ತಾನದಲ್ಲಿ ಗನ್ ತೋರಿಸಿ, ಬೆದರಿಕೆಯೊಡ್ಡಿ ಭಾರತೀಯ ಮಹಿಳೆಯನ್ನು ಒತ್ತಾಯಪೂರ್ವಕವಾಗಿ ಮದುವೆ ಮಾಡಿಕೊಂಡ ಪ್ರಕರಣಕ್ಕೆ ಸಂಭಂಧಿಸಿದಂತೆ, ಭಾರತೀಯ ಮಹಿಳೆ ಉಸ್ಮಾರ ಸುರಕ್ಷಿತ ವಾಪಸಾತಿಗೆ ಪಾಕಿಸ್ತಾನದ ಇಸ್ಲಾಮಾಬಾದ್ ಹೈಕೋರ್ಟ್ ಅನುಮತಿಯನ್ನ ನೀಡಿದೆ. ಪ್ರಕರಣಕ್ಕೆ ಭಾರತೀಯ ಹೈ ಕಮಿಷನ್ ಉಜ್ಮಾ ಗೆ ಎಲ್ಲಾ ಅಗತ್ಯ ಕಾನೂನು ನೆರವು ಒದಗಿಸಿತ್ತು. ಇದೀಗ ಸುರಕ್ಷಿತವಾಗಿ ಭಾರತಕ್ಕೆ ಮರಳಲು ಇಸ್ಲಾಮಾಬಾದ್ ಹೈಕೋರ್ಟ್ ಅನುಮತಿಯನ್ನ ನೀಡಿರುವುದರ ಜೊತೆಗೆ, ರಕ್ಷಣೆಯನ್ನ ನೀಡುವಂತೆ ಪೊಲೀಸರಿಗೆ ಸೂಚನೆ ನೀಡಿದೆ.ಇನ್ನು ವಾಘಾ ಗಡಿ ರೇಖೆಯನ್ನ ಸುರಕ್ಷಿತವಾಗಿ ದಾಟಿಸುವಂತೆಯೂ ಹೈಕೋರ್ಟ್ ಪಾಕಿಸ್ತಾನದ ಪೊಲೀಸರಿಗೆ ನಿರ್ದೇಶನವನ್ನು ಕೊಟ್ಟಿದೆ. ತನಗೆ ಗನ್ ತೋರಿಸಿ ಬೆದರಿಕೆಯೊಡ್ಡಿ ಆಲಿ ಎಂಬಾತ ಒತ್ತಾಯಪೂರ್ವಕವಾಗಿ ಮದುವೆ ಮಾಡಿಕೊಂಡು, ತನ್ನ ವಲಸೆ ದಾಖಲೆಗಳನ್ನು ಕಸಿದುಕೊಂಡಿದ್ದರು ಎಂದು ಉಸ್ಮಾ ಇಸ್ಲಾಮಾಬಾದ್ ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ ಬಿಡುಗಡೆಗೆ ಅನುಮತಿ ಸಿಕ್ಕಿದ್ದು ಹರ್ಷಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ