ಊಹಾಪೋಹಗಳಿಗೆ ತೆರೆ ಎಳೆದ ದೇವೇಗೌಡರು!

H.D devegowda press release about Coalition government

22-05-2018

ಬೆಂಗಳೂರು: ರಾಜ್ಯ ಸಚಿವ ಸಂಪುಟ ರಚನೆಗೆ ಸಂಬಂಧಿಸಿದಂತೆ ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸುದ್ದಿಯ ಬಗ್ಗೆ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ದೇವೇಗೌಡರು ಮಾಧ್ಯಮ‌ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಕಾಂಗೆಸ್ ನಾಯಕರಲ್ಲಿ ಕೆಲವರನ್ನು ಸಂಪುಟಕ್ಕೆ ಸೇರ್ಪಡಿಸಲು ತಮ್ಮ ವಿರೋಧವಿದೆ ಎಂಬ ಅರ್ಥದಲ್ಲಿ ಪ್ರಕಟವಾಗಿರುವ ಸುದ್ದಿ ಕುಚೋದ್ಯದಿಂದ ಕೂಡಿದ್ದು, ಜನರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅಸಮಾಧಾನಗೊಂಡಿದ್ದಾರೆ.

ಸಮ್ಮಿಶ್ರ ಸರ್ಕಾರ ರಚನೆ ಕುರಿತ ಊಹಾಪೋಹ ಸುದ್ದಿಗಳ ಕುರಿತಂತೆ, ‘ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ರಚನೆಯ ಬಗ್ಗೆ ಕೆಲವು ಊಹಪೋಹಾ ಸುದ್ದಿಗಳು ಹರಿದಾಡುತ್ತಿರುವುದನ್ನು ನಾನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದೀನಿ, ಸಮ್ಮಿಶ್ರ ಸರ್ಕಾರದ ಯಾವುದೇ ಪ್ರಮುಖ ನಿರ್ಧಾರಗಳ ಬಗ್ಗೆ ಆಗಲಿ, ಮಂತ್ರಿ ಮಂಡಲದ ರಚನೆಯ ಬಗ್ಗೆ ಆಗಲಿ, ಸಮನ್ವಯ ಸಮಿತಿ ರಚನೆಯ ಬಗ್ಗೆ ಆಗಲಿ ಹಾಗೂ ಸರ್ಕಾರದ ಆಡಳಿತ ವಿಚಾರದಲ್ಲಾಗಲಿ, ನಾನು ಭಾಗಿಯೂ ಆಗುವುದಿಲ್ಲ ಅಥವಾ ನನ್ನ ಹಸ್ತಕ್ಷೇಪವು ಇರುವುದಿಲ್ಲ ಎಂದು ಈ ಮೂಲಕ ಮಾಧ್ಯಮದವರ ಗಮಮಕ್ಕೆ ಮತ್ತು ರಾಜ್ಯದ ಜನತೆಗೆ ತಿಳಿಸಲು ಇಚ್ಛಿಸುತ್ತೇನೆ' ಎಂದು ತಿಳಿಸಿದ್ದಾರೆ.

ಸಚಿವ ಸಂಪುಟ ರಚನೆಯನ್ನು ನಿಯೋಜಿತ ಮುಖ್ಯಮಂತ್ರಿಗಳು ಕಾಂಗ್ರೆಸ್ ನಾಯಕರೊಂದಿಗೆ ಸಮಾಲೋಚಿಸಿ ನಿರ್ಧರಿಸಲಿದ್ದಾರೆ. ಇದರಲ್ಲಿ ನನ್ನ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಯಾವುದೇ ಮಾಧ್ಯಮ ಸುದ್ದಿ ಪ್ರಕಟಣೆಗೂ ಮುನ್ನ ಅಧಿಕೃತ ಮಾಹಿತಿ ಪಡೆಯಬೇಕು. ಈ ರೀತಿಯ ಆಧಾರ ರಹಿತ ಸುದ್ದಿ ಪ್ರಕಟಣೆ ಪತ್ರಿಕೋದ್ಯಮಕ್ಕೆ ಮಾರಕ ಎಂದಿದ್ದಾರೆ.


ಸಂಬಂಧಿತ ಟ್ಯಾಗ್ಗಳು

H.D.Deve Gowda cabinet ಸಮ್ಮಿಶ್ರ ಸರ್ಕಾರ ಊಹಾಪೋಹ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ