ಅಳಿವಿನಂಚಿನ ಪ್ರಾಣಿಗಳ ರಕ್ಷಣೆಗೆ ಬೈಕ್ ರ‍್ಯಾಲಿ ಮೂಲಕ ಜಾಗೃತಿ

awareness to save endangered species

21-05-2018

ಬೆಂಗಳೂರು: ಅಳಿವಿನಂಚಿನ ಪ್ರಾಣಿಗಳನ್ನು ರಕ್ಷಿಸಿ ಎಂಬ ಘೋಷಣೆಯೊಂದಿಗೆ ರಾಷ್ಟ್ರವ್ಯಾಪಿ ಬೈಕ್ ರ‍್ಯಾಲಿ ನಡೆಸುತ್ತಿರುವ ಮೂರು ಮಂದಿಯನ್ನೊಳಗೊಂಡ ತಂಡ ಒಂಟಿ ಕೊಂಬಿನ ಘೇಂಡಾಮೃಗಗಳ ಸಂರಕ್ಷಿಸುವಂತೆ ಅರಿವು ಮೂಡಿಸಲಿದೆ.

ಮಲ್ಲೇಶ್ವರಂನ ಅರಣ್ಯ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನೇಚರ್ ಕೇರ್ ಮತ್ತು ಟೂರಿಸಮ್ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಜುಲಿಯನ್ ಬೋರವ್, ಅಳಿವಿನಂಚಿನಲ್ಲಿರುವ ಒಂಟಿ ಕೊಂಬಿನ ಘೇಂಡಾಮೃಗಗಳ ಕಳ್ಳಬೇಟೆ ತಡೆದು ಈ ವನ್ಯಪ್ರಾಣಿಗಳ ಸಂರಕ್ಷಣೆ ಮಾಡುವಂತೆ ರಾಷ್ಟ್ರ ವ್ಯಾಪ್ತಿ ಬೈಕ್‍ ನಲ್ಲಿ ಅಭಿಯಾನ ಮಾಡಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಕಾರ್ಯಕ್ರಮಕ್ಕೆ ರಾಜ್ಯದ ಅರಣ್ಯ ಇಲಾಖೆ ಸಹಕಾರ ನೀಡಿದೆ. ಕಡಿಮೆ ಸಂಖ್ಯೆಯಲ್ಲಿರುವ  ಒಂಟಿ ಕೊಂಬಿನ ಘೇಂಡಾಮೃಗಗಳು ಕಳ್ಳಬೇಟೆ ಮೂಲಕ ಮತ್ತಷ್ಟು ಕಡಿಮೆಯಾಗುತ್ತಿದ್ದು, ಈ ಪ್ರಾಣಿಗಳ ಸಂರಕ್ಷಿಸಲು ಮುಂದಾಗಿ ಎಂದು ಅರಿವು ಮೂಡಿಸುವ ಪ್ರಯತ್ನ ನಡೆಸುತ್ತ ಪಯಣ ಕೈಗೊಳ್ಳಲಾಗಿದೆ. ಒಟ್ಟು ದೇಶದೆಲ್ಲೆಡೆ, 25ಸಾವಿರ ಕಿಲೋ ಮೀಟರ್ ಸಂಚಾರ ನಡೆಸಲಾಗುತ್ತಿದೆ ಎಂದು ಹೇಳಿದರು.

ಈಗಾಗಲೇ, ಅಸ್ಸಾಂ,  ಜಾರ್ಖಂಡ್,  ಪಶ್ಚಿಮ ಬಂಗಾಳ,  ಒಡಿಸಾ, ತೆಲಂಗಾಣ, ಸೀಮಾಂಧ್ರ, ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದ್ದು, ಕರ್ನಾಟಕದಲ್ಲಿಯೂ ಮೈಸೂರಿನಲ್ಲಿ ಪರಿಸರ ಪ್ರೇಮಿಗಳ ಸಹಾಯದೊಂದಿಗೆ ಅರಿವು ಮೂಡಿಸಲಾಯಿತು ಎಂದು ತಿಳಿಸಿದರು.

ಎರಡು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿರುವ ಒಂಟಿ ಕೊಂಬಿನ ಘೇಂಡಾಮೃಗಗಳನ್ನು ರಕ್ಷಣೆ ಮಾಡುವ ಜೊತೆಗೆ ಅರಣ್ಯ ಇಲಾಖೆಗೂ ಜಾಗೃತಿ ಮೂಡಿಸಬೇಕು. ಈ ನಿಟ್ಟಿನಲ್ಲಿ, ಹಲವು ರಾಜ್ಯಗಳ ಸರ್ಕಾರವು ನಮ್ಮ ಬೆಂಬಲಕ್ಕೆ ನಿಂತಿದ್ದು, ಕರ್ನಾಟಕ ಸರ್ಕಾರವು ನಮಗೆ ಬೆಂಬಲ ನೀಡಬೇಕೆಂದು ಕೋರಿದರು. ಅರಣ್ಯ ಪಡೆ ಮುಖ್ಯಸ್ಥ ಪುನಟಿ ಶ್ರೀಧರ್ ಸೇರಿ ಪ್ರಮುಖರು ಉಪಸ್ಥಿತರಿದ್ದರು.


ಸಂಬಂಧಿತ ಟ್ಯಾಗ್ಗಳು

endangered animals ಅರಣ್ಯ ಕಳ್ಳಬೇಟೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ