ಕಿರುತೆರೆ ನಟಿ ಪ್ರಿಯಾಂಕ ಚಿಂಚೋಳಿ ವಿರುದ್ಧ ವಂಚನೆ ಆರೋಪ

serial actress priyanka chincholi in news see why?

21-05-2018

ಬೆಂಗಳೂರು: ಕಿರುತೆರೆ ನಟಿ ಪ್ರಿಯಾಂಕ ಚಿಂಚೋಳಿ ವಿರುದ್ದ ವಂಚನೆ ಆರೋಪ ಕೇಳಿಬಂದಿದೆ. ಬಿಲ್ ಗೇಟ್ಸ್ ಚಿತ್ರದ ನಾಯಕಿ ಮತ್ತು ಹರಹರ ಮಹಾದೇವ್ ಧಾರಾವಾಹಿ ಖ್ಯಾತಿಯ ನಟಿ ಪ್ರಿಯಾಂಕ ಚಿಂಚೋಳಿ ಇಷ್ಟು ದಿನ ಅಭಿನಯದಿಂದ ಸುದ್ದಿಯಾಗುತ್ತಿದ್ದರು. ಇದೀಗ ವಿವಾದದಿಂದ ಸುದ್ದಿಯಾಗಿದ್ದಾರೆ. ತಮಗೆ ಪ್ರಿಯಾಂಕ ಪ್ರೀತಿಸಿ ವಂಚಿಸಿದ್ದಾಳೆ ಎಂದು ಮಾಡೆಲ್ ಸಾಯಿರಾಮ್ ಪ್ರಿಯಾಂಕ ವಿರುದ್ಧ ಆರೋಪಿಸಿದ್ದಾರೆ.

ನಟಿ ಪ್ರಿಯಾಂಕ ಜೊತೆಗಿನ ಒಂದಿಷ್ಟು ಫೋಟೋ ಮತ್ತು ಮೊಬೈಲ್ ಸಂಭಾಷಣೆ ಸಾಯಿರಾಮ್ ಬಳಿ ಇದ್ದು, ಬೇರೊಬ್ಬ ಹುಡುಗನ ಸಂಘ ಮಾಡಿರುವ ಪ್ರಿಯಾಂಕ ನಮಗೆ ಲವ್ ದೋಖಾ ಮಾಡಿದ್ದಾಳೆಂದು ಸಾಯಿರಾಮ್ ಆರೋಪಿಸುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಿಯಾಂಕ, ಸಾಯಿರಾಮ್ ಕೇವಲ ನನಗೆ ಸ್ನೇಹಿತ, ಆತ ನನ್ನ ಮೇಲೆ ದುರುದ್ದೇಶ ಇಟ್ಟುಕೊಂಡು ಈ ರೀತಿ ಮಾಡಿದ್ದಾನೆ ಎಂದು ಸಾಯಿರಾಮ್ ಮಾಡಿರುವ ಎಲ್ಲಾ ಆರೋಪವನ್ನೂ ತಳ್ಳಿಹಾಕಿದ್ದಾರೆ. ಸಾಯಿರಾಮ್ ಶ್ರೀಮಂತ ಕುಟುಂಬದ ಹಿನ್ನೆಲೆ ಹೊಂದಿದ್ದು ಪ್ರಿಯಾಂಕ ಶಿಶಿರ್ ಹೆಸರಿನ ನಟನ ಜೊತೆ ನಡೆಸಿರುವ ಮೆಸೆಂಜರ್ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 


ಸಂಬಂಧಿತ ಟ್ಯಾಗ್ಗಳು

actor serial ಆರೋಪ ನಾಯಕಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ