ಭಾರೀ ಮಳೆಗೆ ಅಡಿಕೆ ಬೆಳೆ ನಾಶ: ಕೋಟ್ಯಾಂತರ ನಷ್ಟ

Nut crop damage to heavy rainfall

21-05-2018

ದಾವಣಗೆರೆ: ತಡ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಕೋಟ್ಯಾಂತರ ರೂಪಾಯಿ ನಷ್ಟ ಸಂಭವಿಸಿದೆ. ದಾವಣಗೆರೆ ಹಾಗೂ ಚನ್ನಗಿರಿ ತಾಲ್ಲೂಕಿನ ಬಹುತೇಕ ಕಡೆ ಹಾನಿಯಾಗಿದೆ. ಗಾಳಿ ಹೊಡೆತಕ್ಕೆ ಸಾವಿರಾರು ಅಡಿಕೆ ಮರಗಳು ನೆಲಕ್ಕುರುಳಿವೆ. ನೂರಕ್ಕೂ ಹೆಚ್ಚು ಅಡಿಕೆ ತೋಟಗಳಿಗೆ ನಷ್ಟ ಸಂಭವಿಸಿದೆ. ಬೇರು ಸಹಿತ ಅಡಿಕೆ ಮರಗಳು ಕಿತ್ತು ಬಿದ್ದಿವೆ. ಹಾನಿಗೀಡಾದ ಪ್ರದೇಶಗಳಿಗೆ ಮಾಯಕೊಂಡ ಕ್ಷೇತ್ರದ ಶಾಸಕ ಪ್ರೊ.ಲಿಂಗಣ್ಣ ಭೇಟಿ ನೀಡಿ, ರೈತರಿಗೆ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. ಅಪಾರ ನಷ್ಟಕ್ಕೆ ರೈತರು ಕಂಗಾಲಾಗಿದ್ದು, ರೈತರು ಕಣ್ಣೀರು ಹಾಕುತ್ತಿದ್ದಾರೆ. ಅಧಿಕಾರಿಗಳ ತಂಡದಿಂದ ಹಾನಿ ಸಮೀಕ್ಷೆ ನಡೆಯುತ್ತಿದ್ದು, ಜಿಲ್ಲಾಧಿಕಾರಿಗಳು ಘಟನಾ ಸ್ಥಳಕ್ಕೆ ಬರುವಂತೆ ರೈತರು ಆಗ್ರಹಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Farmers Nut tree ನಷ್ಟ ಜಿಲ್ಲಾಧಿಕಾರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ