ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ! ಎಫ್.ಐ.ಆರ್ ದಾಖಲು !

Kannada News

24-05-2017

ತೆಲುಗು ಚಿತ್ರ'ರಾರಂಡೊಯ್ ವೇಡುಕ ಚೂದ್ದಾಂ' ಚಿತ್ರದ ಆಡಿಯೋ ರಿಲೀಸ್ ಫಂಕ್ಷನ್‌ನಲ್ಲಿ ಮಹಿಳೆಯರ ಬಗ್ಗೆ ಹಿರಿಯ ನಟ ಚಲಪತಿರಾವ್ ಅವಹೇಳನಕಾರಿ ಹೇಳಿಕೆಯ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ. 
'ಮಹಿಳೆಯರು ಮನಃಶಾಂತಿಗೆ ಹಾನಿಕಾರಕ' ಎನ್ನುವ ಕಾಮೆಂಟ್ ಗೆ  ಮಹಿಳೆಯರು ಹಾನಿಕಾರಕರಲ್ಲ, ಆದ್ರೆ ಹಾಸಿಗೆಯಲ್ಲಿ  ಕೆಲಸಕ್ಕೆ ಬರ್ತಾರೆ" ಎಂಬ ಉದ್ದಟನದ ಹೇಳಿಕೆ ನೀಡಿದ್ದರು. 
ಈ ಮಧ್ಯೆ ಚಲಪತಿ ರಾವ್ ಹೇಳಿಕೆಯನ್ನು ಮಹಿಳಾ ಸಂಘಟನೆಗಳು ಖಂಡಿಸಿದ್ದು.  ಕೆಲ ಮಹಿಳಾ ಸಂಘಟನೆಗಳ ಕಾರ್ಯಕರ್ತರು ಹೈದರಾಬಾದ್‌ ಜ್ಯೂಬ್ಲಿಹಿಲ್ಸ್ ಪೊಲೀಸ್ ಠಾಣೆಯಲ್ಲಿ ಚಲಪತಿರಾವ್ ವಿರುದ್ಧ ದೂರು ದಾಖಲಿಸಿದ್ದಾರೆ, ಹಾಗು ಚಲಪತಿರಾವ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.ಈ ನಡುವೆ, ಚಲಪತಿರಾವ್ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿ ಮಹಿಳೆಯರ ಕ್ಷಮೆಯಾಚಿಸಿದ್ದು, ತಮಗೆ ಮಹಿಳೆಯರ ಬಗ್ಗೆ ಅಭಿಮಾನವಿದೆ ಎಂದಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ