ಉಪ ಚುನಾವಣೆ: ಮಧುಬಂಗಾರಪ್ಪರನ್ನು ಕಣಕ್ಕಿಳಿಸಲು ಚಿಂತನೆ!

JDS planning to give ticket Madhu bangarappa in ramnagar bye election

21-05-2018

ರಾಮನಗರ: ನಾಲ್ಕನೇ ಬಾರಿಗೆ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಬಂದಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರ ಸ್ವಾಮಿ ಗೆದ್ದಿರುವ ಎರಡು ಕ್ಷೇತ್ರಗಳ ಪೈಕಿ ರಾಮನಗರ ಕ್ಷೇತ್ರಕ್ಕೆ ರಾಜೀನಾಮೆ ನೀಡಿ, ಚನ್ನಪಟ್ಟಣವನ್ನು ಉಳಿಸಿಕೊಂಡಿದ್ದಾರೆ. ಶೀಘ್ರವೇ ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ. ಈಗಾಗಲೇ ರಾಮನಗರದಿಂದ ಎಸ್.ಮಧುಬಂಗಾರಪ್ಪ  ಅವರನ್ನು ಕಣಕ್ಕಿಳಿಸಲು ಜೆಡಿಎಸ್ ಚಿಂತನೆ ನೆಡೆಸಿದೆ. ಅನಿತಾ ಕುಮಾರಸ್ವಾಮಿ ಅವರಿಗೆ ಮೊದಲ ಆಪ್ಷನ್ ಇದ್ದು, ಒಂದು ವೇಳೆ ಈ ಅನಿತಾ ಸ್ಪರ್ಧೆಗೆ ಕುಟುಂಬದಿಂದ ಅಪಸ್ವರ ಕೇಳಿ ಬಂದಲ್ಲಿ ಮಧುಬಂಗಾರಪ್ಪರನ್ನು ಕಣಕ್ಕಿಳಿಸಲು ಪ್ಲಾನ್ ಮಾಡುತ್ತಿದೆ. ಜೆಡಿಎಸ್ ಯುವಘಟಕ ರಾಜ್ಯಾಧ್ಯಕ್ಷ ಆಗಿರುವ ಮಧುಬಂಗಾರಪ್ಪ ಚುನಾವಣೆಯಲ್ಲಿ ಪಕ್ಷವನ್ನು ಬಲವಾಗಿ ಸಂಘಟಿಸಿದ್ದರು. ಅಲ್ಲದೇ ಸೊರಬದಿಂದ ಸ್ಪರ್ಧಿಸಿದ್ದ ಮಧು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಪಕ್ಷ‌ ಸಂಘಟನೆಗಾಗಿ ದುಡಿದ ಮಧುಬಂಗಾರಪ್ಪರನ್ನು ರಾಮನಗರದಿಂದ ಅಖಾಡಕ್ಕಿಳಿಸಲು ಚಿಂತನೆ ನಡೆದಿದೆ. ಇನ್ನು ಈ ಬಗ್ಗೆ ಡಿ.ಕೆ‌.ಶಿವಕುಮಾರ್ ಜೊತೆ ಕುಮಾರಸ್ವಾಮಿ ಚರ್ಚಿಸಿದ್ದಾರೆ ಎನ್ನಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Bbhgujk
  • Bb
  • Professional
Hi uk jj
  • Nuv
  • Professional