ವಿಶ್ವಕ್ಕೆ ಎದುರಾಗಿದೆ ಕಂಟಕ..!21-05-2018

ಸೂರ್ಯನ ನೇರ ಬಿಸಿಲಿನಿಂದ ಜೀವಿಗಳನ್ನು ಕಾಪಾಡಲು ಇರುವ ಓಜೋನ್ ಪದರ ಜೀವರಾಶಿಗಳಿಗೆ ತುಂಬಾನೇ ಮುಖ್ಯ. ಆದರೆ ಇತ್ತೀಚಿಗಿನ ವರ್ಷಗಳಲ್ಲಿ ಈ ಓಜೋನ್ ಪದರದಲ್ಲಿರುವ ರಂಧ್ರ ದೊಡ್ಡದಾಗುತ್ತ ಸಾಗಿದ್ದು, ಇದು ಅಪಾಯದ ಮುನ್ಸೂಚನೆ ಎಂದು ಹೇಳಲಾಗುತ್ತಿದೆ.

ಇತ್ತೀಚಿಗೆ ಓಜೋನ್ ಪದರದ ಕುರಿತು ಅಧ್ಯಯನ ವರದಿಯೊಂದು ಜರ್ನಲ್ ನೇಚರ್ ನಲ್ಲಿ ಪ್ರಕಟವಾಗಿದೆ. ಅಂತಾರಾಷ್ಟ್ರೀಯ ಒಪ್ಪಂದದಲ್ಲಿ ನಿಷೇಧಿತವಾಗಿರುವ ಓಜೋನ್ ಪದರಕ್ಕೆ ಹಾನಿಯನ್ನುಂಟು ಮಾಡುವ ರಾಸಾಯನಿಕ ಉತ್ಪನ್ನಗಳು ಹೆಚ್ಚಾಗುತ್ತಿದೆ. ಇದರಿಂದ ಓಜೋನ್ ಗೆ ತೀವ್ರತರ ಹಾನಿ ಎಂಬುದಾಗಿ ವರದಿ ಹೇಳಿದೆ.

ಮುಖ್ಯ ಬರಹಗಾರರಾಗಿರುವ ವಿಜ್ಞಾನಿ ಸ್ಫೀಫನ್ ಮೋನ್ಟಾಜ್ಕಾ ಸಿಎಫ್ ಸಿ ಅಂದರೆ ಕ್ಲೋರೊ ಫ್ಲೋರೊ ಕಾರ್ಬನ್ಸ್ ಅನ್ನೋ ರಾಸಾಯನಿಕದ ಉತ್ಪನ್ನದ ಪ್ರಮಾಣ ಹೆಚ್ಚಾಗಿದೆ. ಇದರಿಂದ ಓಜೋನ್ ಪದರದಲ್ಲಿರುವ ರಂಧ್ರದ ಪ್ರಮಾಣ ದೊಡ್ಡದಾಗಿದೆ. ಇದು ತಮಗೂ ಶಾಕ್ ನೀಡಿರುವುದಾಗಿ ಸ್ಟೀಫನ್ ಹೇಳಿದ್ದಾರೆ.

ಸಿಎಫ್ ಸಿ ರಾಸಾಯನಿಕ, ರೆಫ್ರಿಜರೇಟರ್ ನಿಂದ ಬರುವ ಆವಿಯಲ್ಲೂ ಇರುತ್ತದೆ. ಇನ್ನು ಅಂತಾರಾಷ್ಟ್ರೀಯ ಒಪ್ಪಂದ ಉಲ್ಲಂಘನೆಯಾಗುತ್ತಿದ್ದು, ಓಜೋನ್ ಪದರ ಹಾನಿಗೊಳಗಾದಲ್ಲಿ ಇಡೀ ವಿಶ್ವಕ್ಕೇ ಮಾರಕ. ಹೀಗಾಗಿ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವರದಿ ಹೇಳಿದೆ.

-ಸುಜಾತಾ ಗಾಂವ್ಕರ್

 


ಸಂಬಂಧಿತ ಟ್ಯಾಗ್ಗಳು

Ozone CFC ಅಂತಾರಾಷ್ಟ್ರೀಯ ನೇಚರ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Good information
  • Siddaram
  • Student