ಬಿಎಸ್ ವೈ ಪರ ಭವಿಷ್ಯ ನುಡಿದ ಅಮ್ಮಣ್ಣಾಯ!

Astrologer prakash ammannaya predicted for BSY!

19-05-2018

ಬೆಂಗಳೂರು: ಇಂದು ಸಂಜೆ ನಡೆಯುವ ವಿಶ್ವಾಸಮತ ಯಾಚನೆಯಲ್ಲಿ ಬಿ.ಎಸ್ ಯಡಿಯೂರಪ್ಪ ವಿಜಯಶಾಲಿಯಾಗಲಿದ್ದಾರೆ ಎಂದು ಪ್ರಖ್ಯಾತ ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಭವಿಷ್ಯ ನುಡಿದಿದ್ದಾರೆ. ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಪ್ರಕಾಶ್ ಅಮ್ಮಣ್ಣಾಯ, ಯಡಿಯೂರಪ್ಪನ ಚಂದ್ರನಿಗೆ ಇಂದು ನೀಚ ಭಂಗ. ಬಿ.ಎಸ್ ಯಡಿಯೂರಪ್ಪನಿಗೆ ರಾಜಯೋಗ ಅಂತ ಹೇಳಿದ್ದಾರೆ. ಯಡಿಯೂರಪ್ಪನ ಏಕಾದಶ ಸ್ಥಾನದಲ್ಲಿ ಗುರುಬಲ ಇದೆ. ಇಂದಿನ ದಿನವೂ ಚೆನ್ನಾಗಿದೆ. ಸಂಜೆ 4.30ರ ಒಳಗೆ ವಿಶ್ವಾಸಮತ ಯಾಚನೆ ಮಾಡಬೇಕು. ಸಂಜೆ 5 ಗಂಟೆ ನಂತರ ಗಳಿಗೆಗಳು ಸರಿಯಿಲ್ಲ. ಬಿಎಸ್ವೈಯವರದ್ದು ಹೋರಾಟವೇ ಜೀವನ. ಇವತ್ತು ಕೂಡಾ ಹೋರಾಟ ನಡೆಸಿಯೇ ಗೆಲ್ಲುತ್ತಾರೆ ಎಂದು ಅಮ್ಮಣ್ಣಾಯ ಭವಿಷ್ಯ ನುಡಿದಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Astrologer prakash ammannaya ಭವಿಷ್ಯ ವಿಶ್ವಾಸಮತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ