ಕೆಆರ್‌ಎಸ್‌ ಜಲಾಶಯದಲ್ಲಿ ನೀರಿನ ಮಟ್ಟ ಕುಸಿತ

water level decreased in krs DAM

19-05-2018

ಮಂಡ್ಯ: ಬೇಸಿಗೆ ಹಿನ್ನೆಲೆ ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ 69.37 ಅಡಿಗಳಿಗೆ ಕುಸಿದಿದೆ. ಒಳ ಹರಿವು 482 ಕ್ಯುಸೆಕ್‌, ಹೊರ ಹರಿವು 943 ಕ್ಯುಸೆಕ್‌ ಇದೆ. ಒಟ್ಟು ಜಲಾಶಯದಲ್ಲಿ 6.82 ಟಿಎಂಸಿ ನೀರಿನ ಸಂಗ್ರಹವಿದೆ. ಜಲಾಶಯದಿಂದ ಪ್ರತಿದಿನ 900 ಕ್ಯುಸೆಕ್‌ ನೀರನ್ನು ಕುಡಿಯಲು ಬಿಡಲಾಗುತ್ತಿದೆ. 4.2 ಟಿಎಂಸಿ ನೀರು ಡೆಡ್‌ ಸ್ಟೋರೆಜ್‌ ಇದೆ. ಇದನ್ನು ಬಿಟ್ಟು ಉಳಿದ 2.4 ಟಿಎಂಸಿ ನೀರನ್ನು ಕುಡಿಯಲು ಬಳಸಬಹುದಾಗಿದೆ.

ಕಬಿನಿ ಜಲಾಶಯದಿಂದ ಮುಂದಿನ ತಿಂಗಳಲ್ಲಿ ನೀರು ಸಂಗ್ರಹವಾಗುವ ಸಾಧ್ಯತೆ ಇದೆ. ಆ ನೀರನ್ನೂ ಸಹ ಕುಡಿಯಲು ಬಳಸಬಹುದು. ಸದ್ಯಕ್ಕೆ ಕುಡಿಯುವ ನೀರಿಗೆ ಯಾವುದೇ ತೊಂದರೆ ಇಲ್ಲ ಎನ್ನಲಾಗುತ್ತಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ ಜಲಾಶಯದಲ್ಲಿ 70 ಅಡಿ ನೀರಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಬೆಂಗಳೂರು, ಮೈಸೂರು, ರಾಮನಗರ ಸೇರಿದಂತೆ ಸುತ್ತಮುತ್ತಲ ಭಾಗಗಳಿಗೆ ಕುಡಿಯಲು ಮಾತ್ರ ಜಲಾಶಯದ ನೀರನ್ನು ಬಳಸಲಾಗುತ್ತಿದೆ.

ಈ ಮಧ್ಯೆ, ಜಲಾಶಯದಿಂದ ನಾಲೆಗಳಿಗೆ ನೀರು ಹರಿಸುವುದನ್ನು ನಿಲ್ಲಿಸಲಾಗಿದ್ದು. ಇದರಿಂದಾಗಿ ಸುತ್ತಮುತ್ತಲ ಕೊಳವೆ ಬಾವಿಗಳಲ್ಲಿಯೂ ನೀರು ಬತ್ತಿ ಹೋಗುತ್ತಿದೆ. ಕೆಆರ್‌ಎಸ್‌ ಜಲಾಶಯದ ಕೆಳಗಿನ ಹಳ್ಳಿಗಳಲ್ಲಿ ಜಲಕ್ಷಾಮ ಎದುರಾಗುವ ಪರಿಸ್ಥಿತಿ ಉಂಟಾಗಿದೆ. ರೈತರು ಮಳೆಗಾಗಿ ಕಾದು ಕುಳಿತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

KRS TMC ಜಲಾಶಯ ಜಲಕ್ಷಾಮ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ