ಹೆಚ್ಡಿಕೆ ವಿರುದ್ಧದ ಯುವಕನ ಪೋಸ್ಟ್ ವೈರಲ್!

Congress-jds coalition: a Boy condemned, fb post viral!

19-05-2018

ಮಂಡ್ಯ: ಕಾಂಗ್ರೆಸ್ ಜೊತೆ ಕೈ ಜೋಡಿಸಿರುವ ಹೆಚ್.ಡಿ ಕುಮಾರ ಸ್ವಾಮಿ ಅವರ ನಡೆಯನ್ನು ಖಂಡಿಸಿ ಫೇಸ್ ಬುಕ್ ನಲ್ಲಿ ಪೋಸ್ಟ್ ಒಂದನ್ನು ಮಾಡಲಾಗಿದೆ. ಕೇಂಪೆಗೌಡ ಒಕ್ಕಲಿಗರ ಮೀಸಲಾತಿ ಸಮಿತಿ ಎಂಬ ಫೇಸ್ ಬುಕ್ ಖಾತೆಯಲ್ಲಿ, ಮಂಡ್ಯ ತಾಲ್ಲೂಕಿನ ಹೊನಾಗಾನಹಳ್ಳಿ ಅಶೋಕ ಎಂಬ ಯುವಕ ಹೆಚ್ಡಿಕೆ ವಿರುದ್ಧ ಪೋಸ್ಟ್ ಮಾಡುವ ಮೂಲಕ ಕಾಂಗ್ರೆಸ್-ಜೆಡಿಎಸ್ ಮೈತ್ರಿಯನ್ನು ಖಂಡಿಸಿದ್ದಾನೆ. ‘ಜೆಡಿಎಸ್ ಬೆಂಬಲಿಸಿದ್ದು ಒಕ್ಕಲಿಗ ವಿರೋಧಿ ಸಿದ್ದರಾಮಯ್ಯ ಅವರನ್ನು ದೂರವಿಡಲು, ಸಿದ್ದರಾಮಯ್ಯ ಜೊತೆಗೆ ಹೋಗಲು ಅಲ್ಲ. ಜಾತಿ ವಿರೋಧಿ ಸಿದ್ದುಗೆ ನಾವು ಬುದ್ಧಿ ಕಲಿಸೋಕೆ ನಿಂತ್ರೆ ನೀವೂ ಅವರ ಜೊತೆ ಸೇರಿದ್ದೀರಾ' ಎಂದ ಬರೆದುಕೊಂಡಿದ್ದಾರೆ.

'ನೀವೂ ಕಾಂಗ್ರೆಸ್ ಜೊತೆ ಕೈ ಜೋಡಿಸಿದರೆ ಇನ್ಮುಂದೆ ಜೆಡಿಎಸ್ ಪಕ್ಷಕ್ಕೆ ಮತ ನೀಡಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಮಾರಣ್ಣನ ವಿರುದ್ಧದ ಆಕ್ರೋಶದ ಪೋಸ್ಟ್ ಜಿಲ್ಲೆಯಲ್ಲಿ ಸಖತ್ ವೈರಲ್ ಆಗಿದೆ.


ಸಂಬಂಧಿತ ಟ್ಯಾಗ್ಗಳು

Facebook Hd kumaraswamy ಆಕ್ರೋಶ ವೈರಲ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ