ಮನೆಯೊಳಗೆ ಕಾಲಿಡುವುದಕ್ಕಿಂತ ಮೊದಲು ಶೂ ಬಿಚ್ಚಿಡಿ..!

while entering to home remove your shoes!

19-05-2018

ಭಾರತೀಯ ಸಂಪ್ರದಾಯದಲ್ಲಿ ಚಪ್ಪಲಿಗಳನ್ನು ಹೊರಗೆ ಬಿಟ್ಟು ಮನೆಯೊಳಗೆ ಹೋಗುವುದು ಸಾಮಾನ್ಯ. ಆದರೆ ಈಗೀಗ ಮನೆಯೊಳಗೂ ಚಪ್ಪಲಿಗಳನ್ನು ಹಾಕಿಕೊಳ್ಳುವುದು ಸರ್ವೇ ಸಾಮಾನ್ಯವಾಗಿದೆ. ಆದರೆ ಹೊರಗೆ ಹಾಕಿಕೊಂಡ ಶೂ ಗಳನ್ನು ಮನೆಯೊಳಗೆ ಹಾಕಿಕೊಳ್ಳುವುದು ಆರೋಗ್ಯದ ದೃಷ್ಠಿಯಿಂದ ಒಳ್ಳೆಯದಲ್ಲ.

ಹಾಗಿದ್ದರೆ ಮನೆಗೆ ಬಂದವರಿಗೆ ಶೂ ಬಿಚ್ಚಿಟ್ಟು ಒಳಗೆ ಬನ್ನಿ ಎಂದು ಹೇಳುವುದು ಸರಿಯೆ..? ಸರಿ ಎನ್ನುತ್ತದೆ ಇತ್ತೀಚಿಗಿನ ಸಂಶೋಧನೆ. ಹೌದು..ಜರ್ನಲ್ ಮೈಕ್ರೊ ಬಿಯಾಮ್ ಈ ಕುರಿತ ಅಧ್ಯಯನ ವರದಿ ಪ್ರಕಟಿಸಿದ್ದು, ಆ ಪ್ರಕಾರ ಮನೆಯೊಳಗೆ ಶೂ ಹಾಕಿಕೊಂಡು ಓಡಾಡುವುದರಿಂದ ಕೀಟಾಣುಗಳು ಮನೆಯೊಳಗೆ ಹರಡುತ್ತವೆ. ಇದು ಅಪಾಯಕಾರಿ ಎಂದಿದೆ.

89 ಜನರ ಮಾದರಿಗಳನ್ನು ಪಡೆದು ಈ ಅಧ್ಯಯನ ನಡೆಸಲಾಗಿದ್ದು, ಮನೆಯೊಳಗೆ ಓಡಾಡಬೇಕಿದ್ದರೆ ಶೂ ಗಳನ್ನು ಬಿಚ್ಚಿಡುವುದು ಒಳ್ಳೆಯ ಪದ್ಧತಿ. ಆರೋಗ್ಯಕ್ಕೂ ಇದು ಒಳ್ಳೆಯದು. ಯಾಕೆಂದರೆ ಅದೇ ಶೂ ಹಾಕಿಕೊಂಡು ಹೊರಗೆ ಪಾರ್ಕಿಂಗ್ ಜಾಗದಲ್ಲಿ, ರೆಸ್ಟೊರೆಂಟ್ ಗಳಲ್ಲಿ, ರೆಸ್ಟ್ ರೂಂ ಗಳಲ್ಲಿ, ರಸ್ತೆ ಬದಿಗಳಲ್ಲಿ ಓಡಾಡಿರುತ್ತೀರಿ. ಇದರಿಂದ ನಿಮ್ಮ ಚಪ್ಪಲಿಗಳಿಗೆ ಸಾಕಷ್ಟು ಕೀಟಾಣುಗಳು ಅಂಟಿಕೊಳ್ಳುತ್ತವೆ. ಇದನ್ನೇ ಹಾಕಿಕೊಂಡು ಮನೆಯೊಳಗೆ ಬಂದರೆ ಮನೆಯೊಳಗೂ ಅವು ಹರಡುತ್ತವೆ. ಅಲ್ಲದೇ ಇವು ಮಕ್ಕಳಿಗೂ ಅಪಾಯಕಾರಿ. ಕೀಟಾಣುಗಳಿಂದ ಸೋಂಕುಗಳು ಮಕ್ಕಳಿಗೆ ಹರಡಬಹುದು ಎಂದು ಅಧ್ಯಯನದಲ್ಲಿ ಹೇಳಲಾಗಿದೆ.


ಸಂಬಂಧಿತ ಟ್ಯಾಗ್ಗಳು

ಕೀಟಾಣು ಅಧ್ಯಯನ disease slippers


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ