ವಿಶ್ವಾಸಮತ: ಕಾರ್ಯತಂತ್ರದ ಬಗ್ಗೆ ಗುಟ್ಟು ಬಿಡದ ಬಿಜೆಪಿ

Floor Test in vidhana soudha: curious about BJP Move

19-05-2018

ಬೆಂಗಳೂರು: ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯ ವಿಧಾನಸಭೆಯಲ್ಲಿ ಇಂದು ಬಿಜೆಪಿ ಬಹುಮತ ಸಾಬೀತು ಪಡಿಸಬೇಕಾಗಿದ್ದು, ನಿನ್ನೆಯಿಂದಲೇ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ. ಡಾಲರ್ಸ್ ಕಾಲೋನಿಯ ತಮ್ಮ ನಿವಾಸದ ಬಳಿ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಆರೂವರೆ ಕೋಟಿ ಜನರ ಆಶೀರ್ವಾದಿಂದ ಬಹುಮತ ಸಾಬೀತು ಪಡಿಸುತ್ತೇನೆ. ಬಹುಮತ ಸಾಬೀತುಪಡಿಸುವ ವಿಶ್ವಾಸವಿದೆ. ಸುಪ್ರೀಂ ಕೋರ್ಟ್ ತೀರ್ಪಿಗೆ ನಾವು ಬದ್ಧ ಎಂದು ಹೇಳಿದ್ದಾರೆ.

ರೈತರ ಸಾಲ ಮನ್ನಾ,  ಭಾಗ್ಯ ಲಕ್ಷಿ ಬಾಂಡ್ ಯೋಜನೆ ಕುರಿತು ನಾಳೆ ಕ್ಯಾಬಿನೆಟ್ ಸಭೆ ಕರೆದು ಒಂದಷ್ಟು ತೀರ್ಮಾನಗಳನ್ನು ತೆಗೆದುಕೊಳ್ಳುತ್ತೇವೆ. ಇಂದು ಸಂಜೆ ಶಾಂತಿಯುತವಾಗಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿ ಎಂದು ಕಿವಿಮಾತು ಹೇಳಿದರು.

ನಂತರದಲ್ಲಿ ಶಾಂಗ್ರೀಲಾ ಹೋಟೆಲ್‌ನಲ್ಲಿ ಬಿಜೆಪಿ ಮುಖಂಡರು, ಶಾಸರೊಂದಿಗಿನ ಸಭೆಗೆ ತೆರಳಿದ್ದಾರೆ. ಸಭೆಯಲ್ಲಿ ಬಿಎಸ್ ವೈ, ಪ್ರಕಾಶ್ ಜಾವ್ಡೇಕರ್, ಜೆಪಿ‌ ನಡ್ಡಾ, ಮುರುಳಿಧರ್ ರಾವ್, ಸೇರಿದಂತೆ ಬಿಜೆಪಿ ಶಾಸಕರು ಭಾಗಿಯಾಗಿದ್ದರು. ವಿಶ್ವಾಸ ಮತ ಯಾಚನೆಗೆ ಬಿಜೆಪಿ‌ ಪಾಳಯ ಕಸರತ್ತು ನಡೆಸಿದೆ. ಹತ್ತು ಹಲವು ರಣ ತಂತ್ರಗಳೊಂದಿಗೆ ತೆರಳಲು ಬಿಜೆಪಿ ಸಿದ್ಧತೆ ನಡೆಸಿದೆ. ಸಭೆ ಮುಗಿದ ಬಳಿಕ ನೇರವಾಗಿ ವಿಧಾನಸೌಧಕ್ಕೆ ಬಿಜೆಪಿ ಶಾಸಕರು ತೆರಳಲಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಯಾವ ರೀತಿಯ ಕಾರ್ಯತಂತ್ರ ರೂಪಿಸಿದ್ದೇವೆ ಅನ್ನೋದರ ಬಗ್ಗೆ ಬಿಜೆಪಿ ಗುಟ್ಟು ಬಿಟ್ಟುಕೊಡಲಿಲ್ಲ.


ಸಂಬಂಧಿತ ಟ್ಯಾಗ್ಗಳು

Yeddyurappa Vidhana Soudha ಕಾರ್ಯತಂತ್ ಕಿವಿಮಾತು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ