ಜಿ ಟಿ ದೇವೇಗೌಡರ ವಿಚಿತ್ರ ಸಮಸ್ಯೆ!

GTD and JDS!

18-05-2018

ಕಾಂಗ್ರೆಸ್ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಿ, ಜೈಂಟ್ ಕಿಲ್ಲರ್ ಎಂಬ ಖ್ಯಾತಿ ಪಡೆದ ಜೆಡಿಎಸ್ ಅಭ್ಯರ್ಥಿ ಮಾಜಿ ಮಂತ್ರಿ ಜಿ.ಟಿ ದೇವೇಗೌಡ ಅವರು ಕುಮಾರ ಸ್ವಾಮಿಯವರೊಂದಿಗೆ ಇಟ್ಟುಕೊಂಡಿರುವ ಸ್ನೇಹ ಮತ್ತು ಬಾಂಧವ್ಯ ಯಾವ ಮಟ್ಟದ್ದು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಹಿಂದೆ ಕುಮಾರ ಸ್ವಾಮಿಯವರ ಸಂಪುಟ ಸಭೆ ಸಚಿವರಾಗಿದ್ದ ಜಿ.ಟಿ ದೇವೇಗೌಡ ಆಗಲೂ ಕೂಡ ಕುಮಾರ ಸ್ವಾಮಿಯವರ ಪ್ರೀತಿಗೆ ಪಾತ್ರವೇನು ಆಗಿರಲಿಲ್ಲ. ಸಹಕಾರ ಇಲಾಖೆಯ ಸಚಿವರಾಗಿ ಮೈಸೂರು ಜಿಲ್ಲೆಯ ಉಸ್ತುವಾರಿ ಮಂತ್ರಿಯಾಗಿಯೂ ಕೂಡ ಮುಖ್ಯಮಂತ್ರಿ ಕುಮಾರ ಸ್ವಾಮಿಯವರಿಂದ ಏನೇನು ಸಹಕಾರ ಪಡೆಯದೆ ಒಂದು ರೀತಿಯಲ್ಲಿ ಸರ್ಕಾರದ ನಡುವೆ ಪರಕೀಯನಾಗಿಬಿಟ್ಟಿದ್ದರು. ಕುಮಾರ ಸ್ವಾಮಿ ಮತ್ತು ಜಿ.ಟಿ ದೇವೇಗೌಡರ ಸಂಬಂಧ ಬಹುತೇಕ ಇಬ್ಬರು ಆಗಂತುಕರ ನಡುವಿನ ಸಂಬಂಧದಂತೆಯೇ ಇತ್ತು. ಕುಮಾರ ಸ್ವಾಮಿಯರು ತಮ್ಮ ಖಾಸಗಿ ತಂಡವನ್ನು ರಚಿಸಿಕೊಂಡು ಸರ್ಕಾರ ನಡೆಸುತ್ತಿದ್ದಾಗ ಜಿಟಿಡಿ ಅವರು ಆ ಗರ್ಭಗುಡಿಯಿಂದ ಹೊರಗೆ ಉಳಿದು ಬಿಟ್ಟಿದ್ದರು.

ಹಿಂದಿನಿಂದಲೂ ಸಿದ್ದರಾಮಯ್ಯರವರಿಗೆ ಹತ್ತಿರವೆಂದೇ ಗುರುತಿಸಲ್ಪಟ್ಟಿದ್ದ ಜಿಟಿಡಿ ಅವರನ್ನು ಜೆಡಿಎಸ್‍ನಲ್ಲಿ ಅನುಮಾನದಿಂದಲೇ ನೋಡಲಾಗುತ್ತಿತ್ತು. ಮಾತ್ರವಲ್ಲದೇ ಜಿಟಿಡಿ ಕೂಡ ಅಷ್ಟು ಸುಲಭವಾಗಿ ದೇವೇಗೌಡರ ಕುಟುಂಬದ ನಿಯಂತ್ರಣಕ್ಕೆ ಬಾರದಿದ್ದುದು ದೇವೇಗೌಡರ ಅನುಯಾಯಿಗಳಿಗೆ ಇರಿಸು-ಮುರಿಸು ಉಂಟು ಮಾಡಿತ್ತು. ಜೆಡಿಎಸ್ ಬಿಟ್ಟು ಬಿಜೆಪಿಗೆ ಹೋಗಿದ್ದ ಜಿಟಿಡಿ ಅಲ್ಲೂ ಕೂಡ ಅವರ ಗರ್ಭಗುಡಿ ಸಂಸ್ಕೃತಿಗೆ ಬೇಸತ್ತು ಮತ್ತೆ ಜೆಡಿಎಸ್‍ಗೆ ಬಂದುಬಿಟ್ಟರು. ಜೆಡಿಎಸ್‍ಗೆ ವಾಪಸ್ ಬಂದ ಮೇಲೂ ಕೂಡ ಜಿಟಿಡಿ ಮತ್ತು ಕುಮಾರ ಸ್ವಾಮಿಯವರ ಸಂಬಂಧವೇನೂ ಸುಧಾರಿಸಲಿಲ್ಲ. ಜಿ.ಟಿ ದೇವೇಗೌಡರ ಮಗನಿಗೆ ಟಿಕೆಟ್ ಕೊಡಿಸುವ ವಿಚಾರದಲ್ಲಿ ಒಂದಷ್ಟು ರಾದ್ಧಾಂತವೂ ಆಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರ.

ಕುಮಾರ ಸ್ವಾಮಿಯವರೂ ಕೂಡ ಜಿಟಿಡಿ ಅವರನ್ನು ಒಂದಷ್ಟು ಹತ್ತಿರ ಇಟ್ಟುಕೊಂಡಿದ್ದೇ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲೆಂದೇ ಹೊರತು ಜಿಟಿಡಿ ಅವರ ಮೇಲಿನ ಪ್ರೀತಿಯ ಕಾರಣದಿಂದಲ್ಲ ಎಂದು ಜೆಡಿಎಸ್‍ ನವರೇ ಹೇಳುತ್ತಾರೆ. ಹಾಗೆಯೇ ಸಿದ್ದರಾಮಯ್ಯನವರನ್ನ ಜಿಟಿಡಿ ಸೋಲಿಸಿದ್ದು ಬಹಳಷ್ಟು ತಮ್ಮ ಸ್ವಂತ ಬಲದಿಂದಲೇ ವಿನಃ ಕುಮಾರ ಸ್ವಾಮಿಯವರ ಪ್ರಚಾರದಿಂದಲ್ಲ ಎಂದು ಜಿಟಿಡಿ ಅವರ ಆಪ್ತರು ಹೇಳುತ್ತಾರೆ. ಹಾಗೆ ಹೇಳಬೇಕೆಂದರೆ ಈಗಲೂ ಜಿಟಿಡಿ ಜೆಡಿಎಸ್ ಪಕ್ಷದಲ್ಲಿ ಒಳಗಿರುವ ಹೊರಗಿನವ. ಅದರೊಂದಿಗೆ ಅವರ ಅನಾನುಕೂಲಗಳಿಗೆ ಅವರ ಹೆಸರೂ ಒಂದು ಕಾರಣ. ಜೆಡಿಎಸ್‍ ನ ಪರಮೋಚ್ಛ ನಾಯಕ ಜೆಡಿಎಸ್‍ ನಲ್ಲಿ ಬೆಳೆಯಲು ಹೇಗೆ ಸಾಧ್ಯ ಎಂದು ಕೆಲವರು ಹುಬ್ಬೇರಿಸುತ್ತಾರೆ . ಹೀಗೆ ಅನೇಕ ವರ್ಷಗಳ ಹಿಂದೆ ದೊಡ್ಡಗೌಡರ ಮೊಮ್ಮಗನೊಬ್ಬ ಅವರನ್ನು ಭೇಟಿ ಮಾಡಲು ಬಂದಿದ್ದ ಜಿಟಿಡಿ ಎದುರಾಗಿ “ನನ್ನ ತಾತನ ಹೆಸರನ್ನ ನೀನ್ಯಾಕೆ ಇಟ್ಕೊಂಡಿದ್ಯಾ” ಎಂದು ಆಶ್ಚರ್ಯ ಭರಿತ ಸಿಟ್ಟಿನಿಂದ ಕೇಳಿದ್ದು ಮತ್ತು ಆ ಪ್ರಶ್ನೆ ಕೇಳಿ ಜಿಟಿಡಿ ಕಂಗಾಲಾಗಿದ್ದನ್ನ ಜಿಟಿಡಿ ಅವರ ಆಪ್ತರು ಇನ್ನೂ ಮರೆತಿಲ್ಲ. ಹೀಗೆ ಜೆಡಿಎಸ್‍ ನೊಂದಿಗೆ ಇಂತಹ ವಿಶೇಷ ಸಂಬಂಧ ಇಟ್ಟುಕೊಂಡಿರುವ ಜಿಟಿಡಿ ಮುಂದೊಂದು ದಿನ ಈ ಸಂಬಂಧವನ್ನು ಹೇಗೆ ಉಳಿಸಿಕೊಳ್ಳುತ್ತಾರೆಂದು ಎಲ್ಲರೂ ಕಾದು ನೋಡಬೇಕಾಗಿದೆ.


ಸಂಬಂಧಿತ ಟ್ಯಾಗ್ಗಳು

GTD H.D.Kumaraswamy ಆಶ್ಚರ್ಯ ವಿಶೇಷ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Good person but cm avarannu eduru hakikondu geddiddu OK but siddu good friend for gt but Owen win not a jds support better devegowdre All the best your dianamic leader
  • Ningaraju
  • Medea Vijayavani and Digvijaya 24/7
Madhu
  • Very good leader gt devegowda but hd devegowda worst politishian
  • Banker