ಕುಖ್ಯಾತ ರೌಡಿ ಚೆಲ್ಲರಾಮ್ ಭೀಕರ ಕೊಲೆ

Horrific Murder of Rowdy challaram!

18-05-2018

ಬೆಂಗಳೂರು: ಮೊದಲ ಪತ್ನಿಯ ಮನೆಯಿಂದ ಎರಡನೇ ಪತ್ನಿಯ ಮನೆಗೆ ಕಾರಿನಲ್ಲಿ ಹೋಗುತ್ತಿದ್ದ ಕುಖ್ಯಾತ ರೌಡಿ ಚೆಲ್ಲರಾಮ್ ಅಲಿಯಾಸ್ ಚೆಲ್ಲಕುಮಾರ್‍ ನನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು, ಕಾರಿನಿಂದ ಹೊರಗೆಳೆದು ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ವರ್ತೂರಿನ ಕೊಡತಿ ಗೇಟ್ ಬಳಿ ನಿನ್ನೆ ಮಧ್ಯರಾತ್ರಿ ಈ ಕೃತ್ಯ ನಡೆದಿದ್ದು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ, ಬಾಣಸವಾಡಿಯ ಜಾನಕಿರಾಂ ಲೇಔಟ್‍ನ ಚೆಲ್ಲಕುಮಾರ್(35) ರಾತ್ರಿ 11.30ರ ವೇಳೆ ಪರಪ್ಪನ ಅಗ್ರಹಾರದ ರಾಯಸಂದ್ರದಲ್ಲಿದ್ದ ಮೊದಲ ಪತ್ನಿಯ ಮನೆಗೆ ಹೋಗಿ 2ನೇ ಪತ್ನಿಯ ಮನೆಗೆ ಕಾರಿನಲ್ಲಿ ವಾಪಸ್ಸಾಗುತ್ತಿದ್ದರು.

ಕೊಡತಿ ಗೇಟ್ ಬಳಿ ಚೆಲ್ಲಕುಮಾರ್‍ ನನ್ನು ಅಡ್ಡಗಟ್ಟಿರುವ ದುಷ್ಕರ್ಮಿಗಳು ಕಾರಿನಿಂದ ಹೊರಗೆಳೆದು ಮಚ್ಚಿನಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದಾರೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ನಡದಿದೆ ಎಂದು ಶಂಕಿಸಲಾಗಿದೆ. ಎದುರಾಳಿಗಳೇ ಸಂಚುರೂಪಿಸಿ ಮೊದಲ ಪತ್ನಿಯ ಮನೆಗೆ ಹೋಗಿ ಹಿಂದಿರುಗುತ್ತಿದ್ದಾಗ ಅಡ್ಡಗಟ್ಟಿ ಕೊಲೆ ಮಾಡಿದ್ದಾರೆ.

ಕೊಲೆ ನಡೆದ ಸ್ಥಳದ ಬಳಿ ಕಾರು ಪತ್ತೆಯಾಗಿದೆ. ಜಾನಕಿರಾಂ ಲೇಔಟ್‍ನ ಚೆಲ್ಲರಾಮ್ ಬಾಣಸವಾಡಿ ಸೇರಿದಂತೆ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕೊಲೆ, ಸುಲಿಗೆ, ಕೊಲೆಯತ್ನ ಸೇರಿದಂತೆ ಹಲವು ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಮೈಸೂರಿನಲ್ಲೂ ಚೆಲ್ಲರಾಮ್ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಬಾಣಸವಾಡಿಯ ರೌಡಿ ಪಟ್ಟಿಯಲ್ಲಿ ಚೆಲ್ಲರಾಮ್ ಇದ್ದಾನೆ.

ನ್ಯಾಯಾಲಯದ ವಾರೆಂಟ್ ಇದ್ದರೂ ತಪ್ಪಿಸಿಕೊಂಡು ಓಡಾಡುತ್ತಿದ್ದ ಚೆಲ್ಲರಾಮ್‍ಗೆ ಇಬ್ಬರು ಪತ್ನಿಯರಿದ್ದು, ಮೊದಲ ಪತ್ನಿ ರಾಯಸಂದ್ರದಲ್ಲಿದ್ದರೆ, 2ನೇ ಪತ್ನಿ ಜಾನಕಿರಾಂ ಲೇಔಟ್‍ನ ತಾಯಿ ಮನೆಯಲ್ಲಿದ್ದರು. ಪ್ರಕರಣ ದಾಖಲಿಸಿರುವ ವರ್ತೂರು ಪೊಲೀಸರು ಕೊಲೆಗೈದ ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆಂದು ಡಿಸಿಪಿ ಡಾ.ಬೋರಲಿಂಗಯ್ಯ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Rowdy Murder ವಾರೆಂಟ್ ಕೊಲೆಯತ್ನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


124++:"*fgjvdjhdbirs
  • 35765f
  • Professional