‘ಸುಪ್ರೀಂ ಆದೇಶ ಸ್ವಾಗತಾರ್ಹ’-ಸಂತೋಷ್ ಹೆಗ್ಡೆ



18-05-2018

ಮೈಸೂರು: ಅತಿ ದೊಡ್ಡ ಪಕ್ಷಕ್ಕೆ ಸರ್ಕಾರ ರಚಿಸಲು ರಾಜ್ಯಪಾಲರು ಅವಕಾಶ ನೀಡಿದ್ದು ಸರಿಯಾಗಿದೆ. ಆದರೆ, ಬಹುಮತ ಸಾಬೀತು ಪಡಿಸಲು 15 ದಿನಗಳ ಕಾಲವಕಾಶ ನೀಡಿದ್ದು ನನಗೆ ವಯಕ್ತಿಕವಾಗಿ ಸರಿಕಾಣುತ್ತಿಲ್ಲ. ಇದು ಶಾಸಕರ ಕುದುರೆ ವ್ಯಾಪರಕ್ಕೆ ಆಸ್ಪದ ನೀಡಿದಂತಾಗಲಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ನಾಳೆ ಸಂಜೆ ಒಳಗಾಗಿ ಬಹುಮತ ಸಾಬೀತಿಗೆ ಸೂಚಿಸಿರೋದು ಸ್ವಾಗತರ್ಹ ವಿಚಾರ, ಎಸ್.ಆರ್. ಬೊಮ್ಮಾಯಿ ಪ್ರಕರಣದ ತೀರ್ಪೀನಂತೆ ರಾಜ್ಯಪಾಲರು ಕ್ರಮ ವಹಿಸಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.

ರೆಸಾರ್ಟ್ ರಾಜಕಾರಣದಿಂದ ಏನೂ ಆಗೋಲ್ಲ. ಕೇವಲ ರೆಸಾರ್ಟ್ ಮಂದಿಗೆ ದುಡ್ಡಾಗಲಿದೆ ಅಷ್ಟೇ ಎಂದು ವ್ಯಂಗ್ಯ ಭರಿತ ಟೀಕೆ ಮಾಡಿದ್ದಾರೆ. ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸುವ ಬಗ್ಗೆ ನನಗೆ ವಿಶ್ವಾಸ ಇಲ್ಲ. ನಾನು ನೀಡಿದ ವರದಿಯನ್ನು ಬಿಜೆಪಿ ಸರ್ಕಾರ ಜಾರಿಗೆ ತರಲಿಲ್ಲ. ಜಾರಿಗೆ ತರುತ್ತೇವೆ ಎಂದು ಬಳ್ಳಾರಿ ತನಕ ಪಾದಯಾತ್ರೆ ಮಾಡಿ ಅಧಿಕಾರಕ್ಕೆ ಬಂದವರೂ ಮಾಡಲಿಲ್ಲ. ಬದಲಿಗೆ ಲೋಕಾಯುಕ್ತದ ಪ್ರಮುಖ ಎರಡು ಅಧಿಕಾರದ ಪೈಕಿ ಒಂದನ್ನು ಮೊಟಕು ಮಾಡಿದ್ದಾರೆ.

ಹೊಸ ಸರ್ಕಾರ ಯಾರದೇ ಬರಲಿ ಲೋಕಾಯುಕ್ತ ಸಂಸ್ಥೆ ಬಲಪಡಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಗಳ ಆಡಳಿತ ಶುದ್ಧವಾಗಿರಬೇಕಾದರೆ ರಾಜ್ಯದಲ್ಲಿ ಲೋಕಾಯುಕ್ತ, ಕೇಂದ್ರದಲ್ಲಿ ಲೋಕಪಾಲ ಸಧೃಡವಾಗಿರಬೇಕು ಎಂದು ಹೇಳಿದರು.

 


ಸಂಬಂಧಿತ ಟ್ಯಾಗ್ಗಳು

Santosh Hegde Government ಲೋಕಾಯುಕ್ತ ಲೋಕಪಾಲ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ