'ಬಿಎಸ್ವೈ ಅನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಬೇಕು’- ಭಗವಾನ್18-05-2018

ಮೈಸೂರು: ಸಂವಿಧಾನವನ್ನು ರಕ್ಷಿಸುತ್ತೇವೆ ಎಂದು ಹೇಳುವ ಪಕ್ಷಗಳು ಈಗ ಸಂವಿಧಾನವನ್ನು ಹಾಳು ಮಾಡುತ್ತಿವೆ ಎಂದು, ಸದ್ಯದ ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ಪ್ರೋ.ಕೆ.ಎಸ್.ಭಗವಾನ್ ಪ್ರತಿಕ್ರಿಯಿಸಿದ್ದಾರೆ. ನಗರದ ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಮಾತನಾಡಿದ ಅವರು, ಬಹುಮತ ಪಡೆದ ಪಕ್ಷಗಳಿಗೆ ಸಿಎಂ ಸ್ಥಾನ ಕೊಡಬೇಕು. ಬಹುಮತ ವಿಲ್ಲದ 104 ಸ್ಥಾನ ಪಡೆದ ಪಕ್ಷಕ್ಕೆ ಸರ್ಕಾರ ರಚಿಸುವ ಅವಕಾಶ ಕೊಟ್ಟಿದ್ದಾರೆ. ರಾಜ್ಯಪಾಲರು ಸಂವಿಧಾನಕ್ಕೆ ವಿರೋಧವಾಗಿ ನಡೆದುಕೊಂಡಿದ್ದಾರೆ ಎಂದು ಹೇಳಿದರು.  

ರಾಜಭವನಕ್ಕೆ ಆ ಹೆಸರು ಇಟ್ಟಿರುವುದು ತಪ್ಪು ಎಂದು ಭಗವಾನ್ ಅಭಿಪ್ರಾಯಪಟ್ಟರು. ರಾಜಭವನಕ್ಕೆ 'ರಾಜ್ಯ ಭವನ' ಎಂದು ಹೆಸರು ಬದಲಾಯಿಸಬೇಕು, ಇದಕ್ಕೆ ಸಂಬಂಧ ಪಟ್ಟವರಿಗೆ ಮನವಿ ಮಾಡುತ್ತಿದ್ದೇನೆ ಎಂದು ತಿಳಿಸಿದರು. ಸಂವಿಧಾನವನ್ನು ಎಲ್ಲರೂ ಗೌರವಿಸಬೇಕು. ಜೆಡಿಎಸ್-ಕಾಂಗ್ರೆಸ್ ಮೈತ್ರಿಯನ್ನು ರಾಜ್ಯಪಾಲರು ಗೌರವಿಸಬೇಕಿತ್ತು. ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ರಾಜ್ಯಪಾಲರ ನಡೆಯನ್ನು ಟೀಕೆ ಮಾಡಿದ್ದಾರೆ .

'ಬಿಜೆಪಿ ಪಕ್ಷಕ್ಕೆ ಸಿಎಂ ಸ್ಥಾನ ನೀಡಿದ್ದಾರೆ, ಇದಕ್ಕೆ ನಮ್ಮ ವಿರೋಧ ಇದೆ', ಇದನ್ನು ವಿರೋಧಿಸಿ ರಾಜ್ಯದಲ್ಲಿ ದೊಡ್ಡ ಆಂದೋಲನ ನಡೆಯುತ್ತಿದೆ. ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಸಬೇಕು ಎಂದು ಭಗವಾನ್ ಒತ್ತಾಯಿಸಿದರು.


ಸಂಬಂಧಿತ ಟ್ಯಾಗ್ಗಳು

K.S.Bhagawan Plitics ಆಂದೋಲನ ರಾಜ್ಯಪಾಲ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ