ನಾಳೆ ಬಹುಮತ ಸಾಬೀತುಪಡಿಸಲು ಸುಪ್ರೀಂ ಆದೇಶ

supreme court ordered to floor test in karnataka tomorrow at 4pm

18-05-2018

ಬೆಂಗಳೂರು: ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಅವಕಾಶ ನೀಡಿದ ರಾಜ್ಯಪಾಲರ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂನ ತ್ರಿಸದಸ್ಯ ಪೀಠ ನಾಳೆ ಸಂಜೆ 4ಗಂಟೆಗೆ ಬಹುಮತ ಸಾಬೀತುಪಡಿಸುವಂತೆ ಆದೇಶಿಸಿದೆ.

ರಾಜ್ಯಪಾಲರ ಕ್ರಮ ಪ್ರಶ್ನಿಸಿ ಕಾಂಗ್ರೆಸ್-ಜೆಡಿಎಸ್ ಮತ್ತು ವಕೀಲ ರಾಮ್ ಜೇಠ್ಮಲಾನಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ  ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ, ಎಸ್‌.ಎ.ಬೋಬ್ಡೆ ಹಾಗೂ ಅಶೋಕ್‌ ಭೂಷಣ್‌ ಅವರಿದ್ದ ತ್ರಿಸದಸ್ಯ ಪೀಠ ನಾಳೆ ವಿಶ್ವಾಸಮತ ಸಾಬೀತು ಪಡಿಸುವಂತೆ ಆದೇಶ ನೀಡಿದೆ.

ಸಂಖ್ಯಾಬಲ‌ ಇರುವ ಮೈತ್ರಿ ಕೂಟಕ್ಕೆ ಅವಕಾಶ ನೀಡಿ ಎಂದು ಕಾಂಗ್ರೆಸ್-ಜೆಡಿಎಸ್ ಅರ್ಜಿಸಿತ್ತು. ರಾಜ್ಯಪಾಲರ ನಡೆ ಸರಿಯಾದುದಲ್ಲ ಎಂದು ರಾಮ್ ಜೇಠ್ಮಲಾನಿ ಅರ್ಜಿ ಸಲ್ಲಿಸಿದ್ದರು.

ಸುಪ್ರೀಂ ಕೋರ್ಟ್ನ ಇಂದಿನ ಆದೇಶದ ಪ್ರಮುಖಾಂಶಗಳು:

1.ನಾಳೆ (ಶನಿವಾರ) ಸಂಜೆ 4 ಗಂಟೆಗೆ ಬಿಜೆಪಿ ವಿಶ್ವಾಸಮತ ಸಾಬೀತು ಪಡಿಸಬೇಕು.

2.ಹಂಗಾಮಿ ಸ್ಪೀಕರ್ ನೇಮಕವಾಗಲಿದ್ದು, ಅವರೇ ಒಟ್ಟಾರೆ ಪ್ರಕ್ರಿಯೆಗೆ ನಿಯಮ ರೂಪಿಸಲಿದ್ದಾರೆ ಹಾಗು ಶಾಸಕರಿಗೆ ಪ್ರಮಾಣ ವಚನ ಬೋಧಿಸುವರು.

3.ವಿಶ್ವಾಸಮತ ಯಾಚನೆ ಆಗುವವರೆಗೂ ಸಿಎಂ ಯಾವುದೇ ಮಹತ್ವದ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳುವಂತಿಲ್ಲ.

4.ವಿಶ್ವಾಸಮತ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಬೇಕು. ಇದೆಲ್ಲವೂ ಇನ್ ಕ್ಯಾಮೆರಾದಡಿ ಇರಲಿದೆ. ಅಗತ್ಯ ಭದ್ರತೆಗೆ ಕರ್ನಾಟಕ ಡಿಜಿಗೆ ಸೂಚಿಸುತ್ತೇವೆ.

5. ರಹಸ್ಯ ಮತದಾನಕ್ಕೆ ಅವಕಾಶ ಇಲ್ಲ. ಎಂಬ ನಿರ್ದೇಶನಗಳನ್ನು ಸುಪ್ರೀಂ ನೀಡಿದೆ.


ಸಂಬಂಧಿತ ಟ್ಯಾಗ್ಗಳು

Floor Test supreme court ಕ್ಯಾಮೆರಾ ರಹಸ್ಯ ಮತದಾನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ