ಕಲುಷಿತ ನೀರು ಸೇವಿಸಿ 45ಕ್ಕೂ ಹೆಚ್ಚು ಕುರಿಗಳ ಸಾವು

More than 45 sheep died of contaminated water

18-05-2018

ರಾಯಚೂರು: ಕಲುಷಿತ ನೀರು ಕುಡಿದ ಸುಮಾರು 45ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ರಾಯಚೂರು ತಾಲ್ಲೂಕಿನ ಚಿಕ್ಕಸೂಗುರು ಗ್ರಾಮದಲ್ಲಿ ನಡೆದಿದೆ. ಖಾಸಗಿ ಕಾರ್ಖಾನೆಯೊಂದರಿಂದ ಹೊರ ಬಿಡಲಾಗಿದ್ದ ನೀರನ್ನು ಸೇವಿಸಿರುವ ಕುರಿಗಳು ಸಾವನ್ನಪ್ಪಿವೆ. ಮಂಚಿಕೊಂಡ ರೈಸ್ ಮಿಲ್ ನ ಕಲುಷಿತ ನೀರನ್ನು ಯಾವುದೇ ಸೂಕ್ತ ವ್ಯವಸ್ಥೆ ಇಲ್ಲದೇ ಹೊರ ಬಿಡಲಾಗುತ್ತಿದ್ದು, ಕಲುಷಿತ ನೀನ್ನು ಕುಡಿದ ಕುರಿಗಳು ಮೃತಪಟ್ಟಿವೆ. ಸತ್ತ ಕುರಿಗಳನ್ನು ಕಂಡ ರೈತರು ಕಂಗಲಾಗಿದ್ದಾರೆ. ಇದರಿಂದ ರೈತರಿಗೆ ಅಪಾರ ನಷ್ಟ ಉಂಟಾಗಿದೆ.


ಸಂಬಂಧಿತ ಟ್ಯಾಗ್ಗಳು

factory Environment ಕಲುಷಿತ ಕುರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ