ಈಜಲು ಹೋದವರು ಮಸಣ ಸೇರಿದರು

2 boys died in canal at udupi

18-05-2018

ಉಡುಪಿ: ಹೊಳೆಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ಉಡುಪಿಯ ಆವರ್ಸೆ ಸಮೀಪ ನಡೆದಿದೆ. ಕಿರಣ್ ಪೂಜಾರಿ ಮತ್ತು ವಿಕ್ರಂ ಪೂಜಾರಿ ಮೃತ ದುರ್ದೈವಿಗಳು. ಚಿಕ್ಕಮ್ಮ ದೊಡ್ಡಮ್ಮನ ಮಕ್ಕಳಾಗಿದ್ದ ಕಿರಣ್ ಪೂಜಾರಿ ಮತ್ತು ವಿಕ್ರಂ ಪೂಜಾರಿ ಆವರ್ಸೆ ಹೊಳೆಯಲ್ಲಿ ಕೈ ಕಾಲು ತೊಳೆದುಕೊಂಡು ಬರುತ್ತೇವೆ ಎಂದು ಹೋಗಿದ್ದರು. ಆದರೆ, ಹೊಳೆಗೆ ಹೋದವರು ತುಂಬ ಹೊತ್ತು ಬಾರದ ಕಾರಣ ಮನೆಯವರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ದುರ್ಘಟನೆ ಸಂಭವಿಸಿರುವುದು ಬೆಳಕಿಗೆ ಬಂದಿದೆ. ಕಿರಣ್ ಗೆ ಮೂರ್ಛೆ ರೋಗವಿದ್ದು, ನೀರಿಗಿಳಿದಾಗ ಸಮಸ್ಯೆ ಕಾಣಿಸಿಕೊಂಡು ಮುಳುಗಿದ್ದಾನೆ. ಆತನನ್ನು ರಕ್ಷಿಸಲು ಹೋದ ವಿಕ್ರಂ ಕೂಡ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

swimming River ಹೊಳೆ ರೋಗ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ