ಜಿಂದಾಲ್ ಗೆ ಏಳು ಟಿಎಂಸಿ ನೀರು ಬಿಡುಗಡೆ ಮಾಡಿದ್ದು ಎಷ್ಟು ಸರಿ.?

Kannada News

24-05-2017 224

ಹಾವೇರಿ:- ಹಾವೇರಿ ಜಿಲ್ಲೆಯ ಶಿಗ್ಗಾಂವಿ ಪಟ್ಟಣದ ದಲಿತಕೇರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿ, ಕೇರಿಯ ಹನುಮಂತಪ್ಪ ಶಿಗ್ಗಾಂವಿ ಮನೆಯಲ್ಲಿ ಉಪಹಾರ ಸೇವಿಸಿದ್ದಾರೆ. ನಂತರ ಮಾತನಾಡಿದ ಅವರು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ನಾನೂರು ಕೋಟಿ ಇದ್ದದ್ದು ಸಾವಿರ ಕೋಟಿಗೆ ಏರಿಸಿ ಕಾಮಗಾರಿ ಮಾಡಿದ್ದು ಸರಿಯೋ ಸುಳ್ಳೋ ಎಂದು ಪ್ರಶ್ನಿಸಿದ್ದು? ಜಲಾಶಯ ಬರಿದು ಮಾಡಿ, ಜಿಂದಾಲ್ ಗೆ ಏಳು ಟಿಎಂಸಿ ನೀರು ಬಿಡುಗಡೆ ಮಾಡಿದ್ದು ಎಷ್ಟರಮಟ್ಟಿಗೆ ಸರಿ.? ನೀರು ಬಿಡುಗಡೆ ಮಾಡಿದ್ದು ಅಕ್ಷ್ಯಮ್ಯ ಅಪರಾಧ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಐಎಎಸ್ ಅಧಿಕಾರಿ ಅನುರಾಗ ತಿವಾರಿ ಸಾವು ಪ್ರಕರಣಕ್ಕೆ ಸಂಭಂಧಿಸಿದಂತೆ,ಪ್ರತಿಕ್ರಿಯಿಸಿದ ಅವರು ಐಎಎಸ್ ಅಧಿಕಾರಿಗೆ ಕಿರುಕುಳ ನೀಡಿದ್ದು, ಭ್ರಷ್ಟಾಚಾರ ಹಗರಣಗಳು ಬಯಲಾಗುತ್ತೆವೆ ಎಂದು ತೊಂದರೆ ಕೊಟ್ಟಿದ್ದಾರೆ, ಅಲ್ಲದೆ ಉತ್ತರ ಪ್ರದೇಶಕ್ಕೆ ಹೋದಾಗ ಅವರ ಸಾವು ಸಂಭವಿಸಿದೆ? ಇದೆಲ್ಲದರ ಬಗ್ಗೆ ತನಿಖೆ ಅಗಬೇಕು ಎಂದು ಉನ್ನತ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳಿಗೆ ರಕ್ಷಣೆ ಇದೆ,ಆದರೆ ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ ಇಲ್ಲದಾಗಿದೆ. ಕೇಂದ್ರ ಸರಕಾರ ಕೊಟ್ಟ ಹಣವನ್ನ ಬಿಡುಗಡೆ ಮಾಡೋ ಯೋಗ್ಯತೆ ಇಲ್ಲದಿರುವ ಸರ್ಕಾರ ಎಂದು ಕುಟುಕಿದ್ದಾರೆ. ಬರಗಾಲಕ್ಕೆ ಸರಕಾರ ಕೊಟ್ಟ ಹಣವೆಷ್ಟು.? ರೈತರ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ, ರೈತರ ಸಾಲಮನ್ನಾ ಆಗದೇ ಇದ್ದರೆ ಎರಡು ತಿಂಗಳಲ್ಲಿ ನಾಲ್ಕೈದು ಲಕ್ಷ ಜನ ರೈತರನ್ನ ಸೇರಿಸಿ ಸರಕಾರದ ಮೂಗು ಹಿಂಡಿ ಸಾಲಮನ್ನಾ ಮಡಿಸುತ್ತೇವೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ. ದಲಿತಕೇರಿಗೆ ಕೇವಲ ತಿಂಡಿ ತಿನ್ನಲು ಬಂದಿಲ್ಲ ,ಅಲ್ಲಿನ ಸಮಸ್ಯೆಗಳನ್ನ ಅರಿತು, ಪರಿಹಾರ ಕಂಡುಕೊಳ್ಳೋ ನಿಟ್ಟಿನಲ್ಲಿ ಭೇಟಿಮಾಡಿದ್ದೇನೆ ಎಂದು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ