ಯಡಿಯೂರಪ್ಪ ಮುಂದಿರುವ ಸವಾಲುಗಳು

Challenges before Yeddyurappa

17-05-2018

ಬೆಂಗಳೂರು: ಮುಂದಿನ 15 ದಿನಗಳ ಒಳಗಾಗಿ ಬಹುಮತ ಸಾಬೀತು ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮುಂದಾಗಿದ್ದು, ಅವರ ಮುಂದೆ ಹಲವಾರು ಸವಾಲುಗಳಿವೆ.

ವಿಧಾನಸಭೆಯಲ್ಲಿ 222 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಭೌತಿಕವಾಗಿ 221 ಮಂದಿ ಶಾಸಕರಿದ್ದಾರೆ. ಕುಮಾರ ಸ್ವಾಮಿ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಆದರೆ ಅವರಿಗೆ ಇರುವುದು ಒಂದೇ ಮತ. ಎರಡು ಮತ ಚಲಾವಣೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಸರಳ ಬಹುಮತಕ್ಕೆ 111 ಸಂಖ್ಯಾಬಲ ಬೇಕು. ಸಧ್ಯ ಬಿಜೆಪಿ ಕೈಲಿರುವುದು 104  ಮಾತ್ರ. ಇನ್ನೂ 7 ಸದಸ್ಯರ ಬಲ ಬೇಕು. ಇದನ್ನು ಪಡೆಯಲು ಬಿಜೆಪಿ ಮುಂದೆ ಕೆಲವು ದಾರಿಗಳು ಉಳಿದಿವೆ.

ಇಂತಹ ಸಂದರ್ಭದಲ್ಲಿ ವಿಶೇಷವಾಗಿ ಲಿಂಗಾಯತ ಶಾಸಕರನ್ನು ಸೆಳೆಯುವುದು ಯಡಿಯೂರಪ್ಪ ಅವರ ಪ್ರಮುಖ ಗುರಿಯಾಗಿದೆ. ಬಿಜೆಪಿಗೆ ಬರುವ ಶಾಸಕರಿಗೆ ಹಣ, ಸಚಿವ ಸ್ಥಾನ, ನಿಗಮ, ಮಂಡಳಿಗಳ ಅಧ್ಯಕ್ಷಗಿರಿ ಆಮಿಷ ಒಡ್ಡಲಾಗುತ್ತಿದೆ. ಬಿಜೆಪಿಯಲ್ಲಿ ಟಿಕೆಟ್ ಸಿಗದೇ ಬೇರೆ ಪಕ್ಷಗಳಿಗೆ ಸೇರಿ ಚುನಾವಣೆಯಲ್ಲಿ ಗದ್ದವರನ್ನು ಗುರಿ ಮಾಡಲಾಗುತ್ತಿದೆ. ಈಗಾಗಲೇ ಏಳೆಂಟು ಶಾಸಕರನ್ನು ಗುರಿ ಮಾಡಿಕೊಂಡು ಕಾರ್ಯಾಚರಣೆ ಮಾಡಲಾಗುತ್ತಿದೆ.

ಜೆಡಿಎಸ್, ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಸಾಧ್ಯವಾಗದಿದ್ದರೆ ಆ ಪಕ್ಷದ 15 ಶಾಸಕರು ವಿಶ್ವಾಸಮತದ ದಿನ ಸದನದಿಂದ ದೂರ ಉಳಿಯುವಂತೆ ನೋಡಿಕೊಳ್ಳುವುದು. ಇಂತಹ ಸಂದರ್ಭ ಸೃಷ್ಟಿ ಆದರೆ ಸದನದ ಒಟ್ಟು ಸಂಖ್ಯಾಬಲ 207ಕ್ಕೆ ಇಳಿಯುತ್ತದೆ. ಇದರ ಆಧಾರದ ಮೇಲೆ ಬಹುಮತ ಸಾಬೀತಿಗೆ 104 ಶಾಸಕರು ಸಾಕು ಎನ್ನುವ ನಿಲುವಿನಲ್ಲಿದ್ದಾರೆ.

ಮತ್ತೊಂದು ಮೂಲದ ಪ್ರಕಾರ, ನೂತನ ಶಾಸಕರು ಪ್ರಮಾಣ ವಚನ ಸ್ವೀಕರಿಸಿದ ನಂತರ ಶಾಸಕರು ರಾಜೀನಾಮೆ ನೀಡುವಂತೆ ಮಾಡುವುದು. ಒಟ್ಟು 15 ಮಂದಿ ಶಾಸಕರು ರಾಜೀನಾಮೆ ನೀಡಿದರೆ ಒಟ್ಟು ಸದನದ ಬಲ ಕುಗ್ಗುತ್ತದೆ. ಆಗ ವಿಶ್ವಾಸ ಮತ ಗೆಲ್ಲಬಹುದು ಎನ್ನುವ ಲೆಕ್ಕಾಚಾರದಲ್ಲಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Government yeddyurappa ಲೆಕ್ಕಾಚಾರ ಶಾಸಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ