ಕಾಂಗ್ರೆಸ್ ನಾಯಕರಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು !

Kannada News

24-05-2017 227

ಬೆಂಗಳೂರು:- ತಮ್ಮನ್ನು ಕಾಂಗ್ರೆಸ್‌ಗೆ ಕರೆ ತಂದಿದ್ದು ಪೀರನ್ ಎಂಬುವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈ ಮೂಲಕ ಹಲವು ಕಾಂಗ್ರೆಸ್ ನಾಯಕರಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ವರಿಷ್ಠರ ಮೂಲಕ ಸಿದ್ದರಾಮಯ್ಯ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಮೂಲ ಕಾರಣ ಕರ್ತರು ಪೀರನ್. ಇದನ್ನು ಸ್ವತಃ ಸಿದ್ದರಾಮಯ್ಯ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಈ ಮೂಲಕ ಪೀರನ್ ಹೆಸರನ್ನು ಮೊದಲ ಬಾರಿಗೆ ಹೊರ ತಂದಿದ್ದಾರೆ. ಪೀರನ್ ನಗರದ ರಿಚ್ಮಂಡ್ ಟೌನ್ ನಿವಾಸಿ. ಮೂಲತಃ ಉದ್ಯಮಿ.
ಇದಕ್ಕೂ ಮುನ್ನ ಸಿದ್ಧರಾಮಯ್ಯ ಅವರು ಕಾಂಗ್ರೆಸ್‌ಗೆ ಸೇರಲು ಪೂರಕವಾದ ವೇದಿಕೆ ಸೃಷ್ಟಿಸಿದವರ ಹೆಸರು ಪುಟ್ಟಸ್ವಾಮಿ. ಒಂದು ಕಾಲದಲ್ಲಿ ಸಿದ್ಧರಾಮಯ್ಯ ಅವರ ಆಪ್ತ ಕಾರ್ಯದರ್ಶಿಯಾಗಿದ್ದರು ಪುಟ್ಟಸ್ವಾಮಿ. ಸಿದ್ಧರಾಮಯ್ಯ ಅವರು ಅಖಿಲ ಭಾರತ ಪ್ರಗತಿಪರ ಜನತಾದಳ [ಎಬಿಪಿಜೆಡಿ] ಕಟ್ಟಿದ ಸಂದರ್ಭದಲ್ಲಿ ತಮ್ಮ ಸ್ನೇಹಿತ ಅರುಣ್ ಕುಮಾರ್ ಎಂಬುವರ ಬಳಿ ನಮ್ಮ ಸಾಹೇಬರನ್ನು ರಾಜಕೀಯವಾಗಿ ಮೂಲೆಗುಂಪು ಮಾಡುವ ಪ್ರಯತ್ನ ನಡೆಯುತ್ತಿದೆ. ಏನಾದರೂ ಮಾಡಿ ಅವರು ಕಾಂಗ್ರೆಸ್‌ಗೆ ಸೇರುವಂತೆ ಮಾಡಿ ಎಂದು ಪುಟ್ಟಸ್ವಾಮಿ ಕೋರಿಕೊಂಡಿದ್ದರು. ನಂತರ ಅರುಣ್ ಕುಮಾರ್ ಅವರು ರಿಚ್ಮಂಡ್ ಟೌನ್‌ನಲ್ಲಿರುವ ಉದ್ಯಮಿ ಪೀರನ್ ಅವರಿಗೆ ಆತ್ಮೀಯರಾಗಿದ್ದ ಸಾರ್ವಜನಿಕ ಸ್ವಾಮ್ಯದ ಸಂಸ್ಥೆಯ ಅಧ್ಯಕ್ಷರಾದವರಿಗೆ ಈ ವಿಷಯ ಮುಟ್ಟಿಸಿದ್ದರು.ಅವರು ಹೋಗಿ  ಪೀರನ್ ಅವರಿಗೆ ಈ ವಿಚಾರ ಹೇಳಿದರು. ಆಗ ಪೀರನ್. ಮೊದಲ ಬಾರಿಗೆ ಸಿದ್ಧರಾಮಯ್ಯ ಅವರ ಹೆಸರನ್ನು ಎಐಸಿಸಿ ಮಟ್ಟಕ್ಕೆ ತಲುಪಿಸಿದರು. ಸಿದ್ಧರಾಮಯ್ಯ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡರೆ ಪಕ್ಷ ಮರಳಿ ಅಧಿಕಾರಕ್ಕೆ ಬರಲು ಸಾಧ್ಯವಾಗುತ್ತದೆ ಎಂಬ ಸಂದೇಶವೂ ಇದೇ ಸಂದರ್ಭದಲ್ಲಿ ರವಾನೆಯಾಯಿತು ಎಂದು ತಿಳಿಸಿದ್ದಾರೆ.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ