'ಇನ್ನೆರೆಡು ದಿನದಲ್ಲಿ ಸಾಲ ಮನ್ನಾ'- ಬಿಎಸ್ವೈ17-05-2018

ಬೆಂಗಳೂರು: ನೂತನ ಮುಖ್ಯ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಿ.ಎಸ್ ಯಡಿಯೂರಪ್ಪ ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿದರು. ರಾಜ್ಯದ ಜನತೆಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ ಬಿಎಸ್ವೈ, ನನ್ನ ಮತ್ತು ನಮ್ಮ ಪಕ್ಷದ ಮೇಲೆ ಜನ ಪ್ರೀತಿ ಇಟ್ಟಿದ್ದಾರೆ. ಜನರ ಪ್ರೀತಿಯಿಂದ ನಾನು ಮೂರನೇ ಬಾರಿ ಮತ್ತೆ ಸಿಎಂ ಆಗಿದ್ದೇನೆ, ರೈತರಿಗೂ ಧನ್ಯವಾದಗಳನ್ನು ಅರ್ಪಿಸಿದರು. ಇದೇ ವೇಳೆ ಪ್ರಧಾನಿ ಮೋದಿಯವರಿಗೆ ಹಾಗೂ ಅಮಿತ್ ಷಾ ಅವರಿಗೆ ನನ್ನ ಕೃತಜ್ಞತೆಗಳು ಎಂದರು.

‘ಕಾಂಗ್ರೆಸ್ ಹಾಗು ಜೆಡಿಎಸ್ ಗೆ ಜನರ ಬೆಂಬಲ ಇಲ್ಲ. ಜನ ಬೆಂಬಲವನ್ನು ಆ ಎರಡೂ ಪಕ್ಷಗಳು ದುರುಪಯೋಗ ಪಡಿಸಿಕೊಂಡಿವೆ, ನಮ್ಮ ಪಕ್ಷಕ್ಕೆ ಜನ ಬೆಂಬಲ ಇದೆ. ಜನ ನಮಗೆ ಬಹುದೊಡ್ಡ ಪಕ್ಷವಾಗಿ ಗೆಲ್ಲಿಸಿದ್ದಾರೆ’ ಎಂದು ನುಡಿದರು. ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ನಾನು ವಿಶ್ವಾಸ ಮತದ ಕುರಿತು ಮಾತಾಡಲ್ಲ ಎಂದರು.

'ರೈತರ ರಾಷ್ಟ್ರೀಕೃತ ಬ್ಯಾಂಕುಗಳ 1 ಲಕ್ಷ ಸಾಲ ಮನ್ನಾ, ಸಹಕಾರ ಬ್ಯಾಂಕುಗಳ ರೈತರ ಸಾಲ ಮನ್ನಾ, ನೇಕಾರರ ಸಾಲ ಮನ್ನಾ ಕುರಿತು ಮುಖ್ಯ ಕಾರ್ಯದರ್ಶಿಯವರಿಂದ ಅಂಕಿ ಅಂಶ ಕೇಳಿದ್ದೇನೆ, ಇನ್ನು ಎರಡು ದಿನದಲ್ಲಿ ಸಾಲ ಮನ್ನಾ ಮಾಡಿ ಘೋಷಣೆ ಮಾಡುತ್ತೇನೆ'. 'ನಾನು ಕೊಟ್ಟ  ಭರವಸೆಗಳನ್ನು ಈಡೇರಿಸುತ್ತೇನೆ' ಎಂದು ಹೇಳಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ