‘ಕಾಂಗ್ರೆಸ್ ಶಾಸಕರ ಮೇಲೂ ಒತ್ತಡ ಹೇರುತ್ತಿದ್ದಾರೆ’-ಪರಂ16-05-2018

ಬೆಂಗಳೂರು: ಕಾಂಗ್ರೆಸ್ ಶಾಸಕರ ಮೇಲೂ ಬಿಜೆಪಿ ಒತ್ತಡ, ಭಯ ಹೇರುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಆರೋಪಿಸಿದ್ದಾರೆ. ನಗರದಲ್ಲಿ ಮಾತನಾಡಿದ ಪರಮೇಶ್ವರ್ ನಮ್ಮ ಶಾಸಕರಲ್ಲಿ ಒಗ್ಗಟ್ಟಿದೆ. ಬಿಜೆಪಿ ಬೆದರಿಕೆ ಮೂಲಕ‌ ಎಲ್ಲರನ್ನು ಸೆಳೆಯೋಕೆ ಪ್ರಯತ್ನ ಮಾಡುತ್ತಿದೆ. ಬಿಜೆಪಿಯ ಆಮಿಷಕ್ಕೆ ಯಾರೂ ಒಳಗಾಗಲ್ಲ ಎಂದರು. ಬಿಜೆಪಿ ತನ್ನ ಹಳೆ ಟ್ರಿಕ್ಸ್ ಅನ್ನು ಪ್ಲೇ ಮಾಡಲು ಹೊರಟಿದೆ. ನಾವೂ ಕೂಡ ರಾಜ್ಯಪಾಲರನ್ನು ಭೇಟಿ ಮಾಡಲು ಅವಕಾಶ ಕೇಳಿದ್ದೇವೆ, ಅವಕಾಶ ಕೊಡುತ್ತಾರೆ ಅನ್ನೋ ವಿಶ್ವಾಸ ಇದೆ. ಇಲ್ಲದಿದ್ದರೆ ಶಾಸಕರ ಪರೇಡ್ ಏನೂ ಮಾಡಲ್ಲ. ರಾಜ್ಯಪಾಲರ ನಿರ್ಧಾರ ಏನಿದೆ ಕಾದು ನೋಡೋಣ ಎಂದರು.


ಸಂಬಂಧಿತ ಟ್ಯಾಗ್ಗಳು

G. Parameshwara Governor ಆಮಿಷ ಪರೇಡ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಉತ್ತಮ ಗುಣಮಟ್ಟದ ಆಡಳಿತ ವ್ಯವಸ್ಥೆ ಮಾಡಿ 6.5ಕೋಟಿ ಜನರಲ್ಲಿ ನಂಬಿಕೆ ಮತ್ತು ಭರವಸೆ ಮೂಡಿಸುವ ಪ್ರಯತ್ನ ಮಾಡಿ ಎಲ್ಲಾ ಧರ್ಮದವರ ದೃಷ್ಟಿಯಿಂದ ಜಾತ್ಯತೀತ ತತ್ವಗಳನ್ನು ಅನುಸರಿಸಿಸುವ ರಾಜ್ಯ ವಾಗಿರಲಿ ಕೋಮುವಾದ ರಾಜ್ಯ ಆಗಬಾರದು ಯಾಕೆಂದರೆ ನಾವೇಲರು ಕನ್ನಡಿಗರು
  • Yashwant K Myagadi
  • Social worker