‘ಕುದುರೆ ವ್ಯಾಪಾರಕ್ಕೆ ಅವಕಾಶ ಕೊಡಬಾರದು’-ಹೆಚ್ಡಿಕೆ16-05-2018

ಬೆಂಗಳೂರು: ಚುನಾವಣಾ ಪ್ರಚಾರಕ್ಕೆ ನಾನು ಹೋಗದೇ ಎರಡೂ ಕ್ಷೇತ್ರಗಳಲ್ಲಿ ಗೆದ್ದಿದ್ದೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರ ಸ್ವಾಮಿ ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಹಾಗೂ ರಾಜ್ಯಪಾಲರು ಕುದುರೆ ವ್ಯಾಪಾರಕ್ಕೆ ಅವಕಾಶ ಕೊಡಬಾರದು. ನೀವೇನಾದರೂ ಆಪರೇಷನ್ ಗೆ ಕೈ ಹಾಕಿದರೆ ಬಿಜೆಪಿಯಿಂದ 50-60 ಶಾಸಕರಿಗೂ ನಾವು ಕೈ ಹಾಕುತ್ತೇವೆ ಎಂದು ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಆಗುವ ಡೆವಲಪ್ಮೆಂಟ್ ಮುಖ್ಯವಲ್ಲ. ಜಾತ್ಯತೀತ, ಕೋಮುವಾದದ ಸಬ್ಜೆಕ್ಟ್ ಇಟ್ಟುಕೊಂಡು ಬಿಜೆಪಿ ಏನು ಮಾಡಿದೆ ನನಗೆ ಚೆನ್ನಾಗಿ ಗೊತ್ತಿದೆ ಎಂದು ಕುಟುಕಿದ್ದಾರೆ.

ಅಂದು ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡುವಾಗ ತಂದೆಯ ಮಾತು ಉಲ್ಲಂಘಿಸಿದೆ. ಅದೊಂದೇ ನಾನು ತಂದೆ ವಿರುದ್ಧ ಜೀವನದಲ್ಲಿ ನಡೆದುಕೊಂಡ ಘಟನೆ ಎಂದರು.

ನನಗೆ ಎರಡೂ ಕಡೆಯಿಂದ ಆಫರ್ ಇದೆ. ಆದರೆ ನಮ್ಮ ತಂದೆಯ ತತ್ವ ಸಿದ್ಧಾಂತಕ್ಕೆ ವಿರೋಧ ಹೋಗಲ್ಲ. ಹಿಂದೆ ಮಾಡಿದ ತಪ್ಪನ್ನು ತಿದ್ದಿಕೊಳ್ಳುವ ಮತ್ತೆ ಆವಕಾಶ ಸಿಕ್ಕಿದೆ. ನಮ್ಮ ತಂದೆ ಜ್ಯಾತ್ಯತೀತ ಸಿದ್ಧಾಂತಕ್ಕೆ ನಾನು ತಲೆ ಬಾಗಿದ್ದೇನೆ, ಕೊನೆಗಾಲದಲ್ಲಿ ಅವರಿಗೆ ನೋವು ಕೊಡಬಾರದು ಎಂದು ಈ ನಿರ್ಧಾರ ಮಾಡಿದ್ದೇನೆ ಎಂದರು ಕುಮಾರ ಸ್ವಾಮಿ.


ಸಂಬಂಧಿತ ಟ್ಯಾಗ್ಗಳು

H.D.Kumaraswamy H.D.Deve Gowda ಉಲ್ಲಂಘನೆ ಆಪರೇಷನ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ