ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದ ಕೋಳಿವಾಡ

Siddaramaiah v/s K.B.Koliwad

16-05-2018 459

ನಾನು ಅಪ್ಪಟ ಕಾಂಗ್ರೆಸಿಗ, ಸಧ್ಯದ ಕಾಂಗ್ರೆಸ್ ಪರಿಸ್ಥಿತಿ ಆತ್ಮಾವಲೋಕನ ಮಾಡಬೇಕು ಎಂದು ಮಾಜಿ ಸ್ಪೀಕರ್ ಕೆ.ಬಿ ಕೋಳಿವಾಡ ಅವರು ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ. ತಮ್ಮ ಮಾತುಗಳನ್ನು ಮುಂದುವರೆಸಿದ ಅವರು ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಸ್ಥಿತಿಗೆ ಸಿದ್ದರಾಮಯ್ಯ ನಡೆ ಕಾರಣ, ನಾನು ಸ್ಪೀಕರ್ ಆದರೂ ಮೂಲ ಕಾಂಗ್ರೆಸ್ ತತ್ವಕ್ಕೆ ಬದ್ಧನಾಗಿದ್ದೆ. ಸಿದ್ದರಾಮಯ್ಯಗೆ ಪಕ್ಷದ ಬಗ್ಗೆ ಅಭಿಮಾನವಿಲ್ಲ, ಅವರ ರಕ್ತ ಕಾಂಗ್ರೆಸ್ ನದು ಅಲ್ಲ. ಅವರ ಸರ್ವಾಧಿಕಾರಿ ಧೋರಣೆ ಸೋಲಿಗೆ ಕಾರಣ. ಇವರೆ, ನನ್ನ ಹಾಗೂ ಇಮಾಂದಾರ್ ಸೋಲಿಸಲು ಕಳೆದ ಬಾರಿ ಯತ್ನಿಸಿದ್ದರು, ನನ್ನ ಸೋಲಿಗೆ ಸಿದ್ದರಾಮಯ್ಯ ಕಾರಣ, ನನ್ನ ಕ್ಷೇತ್ರಕ್ಕೆ ಪ್ರಚಾರಕ್ಕೆ ಬರಲಿಲ್ಲ ಎಂದು ದೂರಿದ್ದಾರೆ.

‘ಸಿದ್ದರಾಮಯ್ಯ ಅವರಿಂದ ಕಾಂಗ್ರೆಸ್ ಗೆ ಉಪಯೋಗವಿಲ್ಲ. ರಾಹುಲ್ ಗಾಂಧಿ ಮಗನಿದ್ದಂತೆ, ಈ ಮನುಷ್ಯನನ್ನು ಕೆಪಿಸಿಸಿ ಅಧ್ಯಕ್ಷ ಮಾಡಿದರೆ ಅನ್ಯಾಯ ಆಗುತ್ತದೆ. ಇದರಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲೂ ತೊಂದರೆ ಆಗಲಿದೆ ಎಂದು ಹೇಳಿದರು. ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಇರಲಿ, ಅಥವಾ ಡಿಕೆಶಿ ಇರಲಿ, ಅಥವಾ ಲಿಂಗಾಯತರನ್ನ ಮಾಡಿ, ಆ ಮನುಷ್ಯನಿಗೆ ಜಾತಿ, ಅಧಿಕಾರ ಮುಖ್ಯ. ಹಿಂದೆ ಜೆಡಿಎಸ್ ಗೂ ಮೋಸ ಮಾಡಿದ್ದರು. ತನ್ನಿಂದಲೇ ಪಕ್ಷ ಅಂತಾರೆ ಸಿದ್ದರಾಮಯ್ಯ' ಎಂದು, ಕಟುವಾಗಿ ಟೀಕಿಸಿದ್ದಾರೆ.

ಪ್ರಧಾನಿ ಮೋದಿ ಬರಿ ಸುಳ್ಳು ಹೇಳುತ್ತಾರೆ, ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬರಬೇಕು. ಇಂದಿರಾ ಗಾಂಧಿ ಯಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನಿಂದ ಮಾತ್ರ ದೇಶದ ಉದ್ಧಾರ ಎಂದರು.

ಪರಮೇಶ್ವರ್ ಸೋಲಿಗೂ ಸಿದ್ದರಾಮಯ್ಯ ಕಾರಣ, ಸೋಲು ಗೆಲುವು ಮುಖ್ಯವಲ್ಲ ಪಕ್ಷ ಮುಖ್ಯ. ಕುಮಾರ ಸ್ವಾಮಿಯವರನ್ನು ಸಿದ್ದರಾಮಯ್ಯ ಸಿಎಂ ಆಗಲು ಬಿಡಲ್ಲ. ಸಿದ್ದರಾಮಯ್ಯರಿಂದ ಕಾಂಗ್ರೆಸ್ ಗೆ ಉಳಿಗಾಲವಿಲ್ಲ, ಅವರಿಗೆ ಯಾವುದೇ ಸ್ಥಾನ ಕೊಡಬಾರದು, ಹಣ, ಅಧಿಕಾರದ ದರ್ಪ ತೋರಿದರು.

ಅಶೋಕ್ ಖೇಣಿಗೆ ಟಿಕೆಟ್ ನೀಡಿದರು, ಖರ್ಗೆ, ವೀರಪ್ಪ ಮೊಯ್ಲಿಯಂತಹ ಹಿರಿಯರನ್ನು ಕಡೆಗಣಿಸಲಾಯ್ತು, ಲೋಕಸಭಾ ಚುನಾವಣೆ ಇವರ ನೇತೃತ್ವದಲ್ಲಿ ನಡೆಯಬಾರದು. ರಾಹುಲ್ ಗಾಂಧಿಗೆ ಹೇಳಿ ಟಿಕೆಟ್ ಪಡೆದಿದ್ದೆ. ಜಾತ್ಯತೀತ ಸರ್ಕಾರ ರಚನೆಗೆ ಹೈಕಮಾಂಡ್ ಯತ್ನಿಸುತ್ತಿದೆ. ಅವರಪ್ಪನಾಣೆ ಇವರಪ್ಪನಾಣೆ ಅಂತ ಚಾಮುಂಡಿಯಲ್ಲಿ ಸೋತರು. ಬಾದಾಮಿಯಲ್ಲಿ ಅಲ್ಪ ಮತಗಳಿಂದ ಗೆದ್ದಿದ್ದಾರೆ ಪಕ್ಷ ಉಳಿಯಲು ಈ ಮನುಷ್ಯನಿಗೆ ಯಾವುದೇ ಅಧಿಕಾರ ನೀಡಬೇಡಿ ಎಂದು ತಮ್ಮ ಅಸಮಾಧಾ ಹೊರಹಾಕಿದ್ದಾರೆ.


ಸಂಬಂಧಿತ ಟ್ಯಾಗ್ಗಳು

K.B.Koliwad siddaramaiah ಇಂದಿರಾ ಗಾಂಧಿ ಜಾತ್ಯತೀತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ