ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ಕುಟುಂಬದ ವಿರುದ್ದ ಗಂಭೀರ ಆರೋಪ !

Kannada News

24-05-2017 248

ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಕುಟುಂಬದ ವಿರುದ್ದ ಗಂಭೀರ ಆರೋಪ ಕೇಳಿಬಂದಿದೆ. ಕಾಂಗ್ರೆಸ್ ಕಾರ್ಯಕರ್ತನಾದ ಎಸ್. ವೆಂಕಟೇಶ್ ಗೌಡ ಎಂಬವರು ಆರೋಪವನ್ನು ಮಾಡಿದ್ದಾರೆ ಹಾಗು ಅಕ್ರಮ ಆಸ್ತಿ ತನಿಖೆ ನಡೆಸುವಂತೆ ಐಟಿ ಗೆ ದೂರು ನೀಡಿದ್ದಾರೆ. ಸಾವಿರಾರು ಕೋಟಿ ರೂಪಾಯಿ ಬೇನಾಮಿ ಆಸ್ತಿ ಹೊಂದಿರುವುದಾಗಿ ಐಟಿ ಇಲಾಖೆಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ. ದೇವೇಗೌಡ ಹಾಗೂ ಕುಮಾರಸ್ವಾಮಿ ಕುಟುಂಬ ಬೇನಾಮಿ ಆಸ್ತಿ ಮಾಡಿದೆ. ಕರ್ನಾಟಕದ ಹಣ ಲೂಟಿ ಮಾಡಿ  ಸುಮಾರು 20 ಸಾವಿರ ಕೋಟಿ ಗೂ ಹೆಚ್ಚು ಅಕ್ರಮ ಆಸ್ತಿ ಮಾಡಿದ್ದಾರೆ. ಯುಎಸ್ ಎ ಮತ್ತು ದೆಹಲಿಯಲ್ಲಿ ಅಕ್ರಮ ಹಣ ಇಟ್ಟಿದ್ದಾರೆ. ಅಧಿಕಾರದಲ್ಲಿ ಇಲ್ಲದಿದ್ದರೂ ಕುಮಾರಸ್ವಾಮಿ ಹಾಗೂ ದೇವೇಗೌಡ ಕುಟುಂಬದಿಂದ ಹಣ ಲೂಟಿ-ರಿಯಲ್ ಎಸ್ಟೇಟ್,ಸಿನಿಮಾ,ರಫ್ತು,ಟೆಕ್ಸ್‌ಟೈಲ್, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಣ ವಿನಿಮಯ ಮತ್ತಿತರ ಉದ್ಯಮದಲ್ಲಿ ಹಣ ಹೂಡಿದ್ದಾರೆ-ಜಂತಕಲ್ ಮೈನಿಂಗ್ ನಲ್ಲೂ ಕುಮಾರಸ್ವಾಮಿ ಪಾತ್ರ ಇದೆ ಎಂದು ದೂರಿದ್ದಾರೆ. ದೇವೇಗೌಡರ ಹಿರಿಯ ಸೊಸೆ ಕವಿತಾ ಅವರ ಹೆಸರಿಗೆ ಅತಿ ಹೆಚ್ಚು ಹಣ ಹೋಗಿದೆ, ಗೃಹಿಣಿ ಆಗಿರುವ ಕವಿತಾ ಬಾಲಕೃಷ್ಣ ಗೌಡ, ಸಾವಿರ ಕೋಟಿ ಬೆಲೆ ಬಾಳುವ ಆಸ್ತಿಯನ್ನ ಅಮೆರಿಕ ಮತ್ತು ಉತ್ತರ ಭಾರತದಲ್ಲಿ ಮಾಡಿದ್ದಾರೆ. ಜೆಡಿಎಸ್ ಕಾರ್ಯಕರ್ತರು, ಹಾಸನ ಮತ್ತು ಬೆಂಗಳೂರಿನ ತಮ್ಮ ಮನೆ ಕೆಲಸದವರ ಹೆಸರಲ್ಲಿ ಬೇನಾಮಿ ಆಸ್ತಿ ಮಾಡಿದ್ದಾರೆ.ಇವರ ಅಕ್ರಮ ಆಸ್ತಿ ತನಿಖೆ ನಡೆಸುವಂತೆ ಕಾಂಗ್ರೆಸ್ ಕಾರ್ಯಕರ್ತ ಎಸ್. ವೆಂಕಟೇಶ್ ಗೌಡ ಐಟಿ ಗೆ ಮನವಿ ಮಾಡಿದ್ದಾರೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ