ಕಾಂಗ್ರೆಸ್ ಶಾಸಕರ ಮೇಲೆ ಕಣ್ಗಾವಲು!

Congress MLAs May shift to eagleton resort

16-05-2018

ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ಶಾಸಕಾಂಗ ಪಕ್ಷ ಸಭೆಗೆ ಬಂದ ಶಾಸಕರಿಗೆ ಶಾಂಗ್ರಿ ಲಾ ಹೊಟೇಲ್ ರೂಂ ಬುಕ್ ಮಾಡಲಾಗಿದೆ. ಕೆಪಿಸಿಸಿಗೆ ಬಂದ ನಾಯಕರ ಜೊತೆ ಮಾತನಾಡಿ ತೆರಳಿದ ಶಾಸಕರನ್ನು ನೇರವಾಗಿ ಶಾಂಗ್ರಿ ಲಾ ಹೊಟೇಲ್ ಗೆ ಕರೆದುಕೊಂಡು ಹೋಗಲಾಗುತ್ತಿದೆ. ಯಾರೂ ಹೋಟೆಲ್ ನಿಂದ ಹೊರ ಹೋಗದಂತೆ ನೋಡಿಕೊಳ್ಳಲಾಗುತ್ತಿದ್ದು, ಇಂದು ತಡ ರಾತ್ರಿ ಎಲ್ಲರನ್ನು ಬಸ್ ಮೂಲಕ ಕೊಚ್ಚಿಗೆ ಕರೆದುಕೊಂಡು ಹೋಗುವುದಾಗಿ ತಿಳಿದು ಬಂದಿದೆ. ಕೊಚ್ಚಿ ಅಥವ ಬಿಡದಿಯ ಈಗಲ್ ಟನ್ ರೆಸಾರ್ಟ್ ಗೆ ಕಾಂಗ್ರೆಸ್ ಶಾಸಕರು ಶಿಫ್ಟ್ ಆಗುವ ಸಾದ್ಯತೆ ಇದೆ. ಎಲ್ಲ ಶಾಸಕರನ್ನು ಒಂದಡೆ ಸೇರಿಸಿ ಯಾರು ಕೈ ಬಿಟ್ಟು ಹೋಗದಂತೆ ನೋಡಿಕೊಳ್ಳುವತ್ತ ಕಾಂಗ್ರೆಸ್ ಮುಖಂಡರು ಗಮನ ಹರಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

KPCC Resort ಶಾಂಗ್ರಿ ಲಾ ಈಗಲ್ ಟನ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ