ಶಾಸಕಾಂಗ ಪಕ್ಷದ ಸಭೆ ನಂತರ ರಾಜಭವನಕ್ಕೆ: ಶೋಭಾ



16-05-2018 300

ಬೆಂಗಳೂರು: ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಇನ್ನೇನು ಆರಂಭವಾಗುತ್ತಿದ್ದು, ಇದಾದ ಬಳಿಕ ನಾವು ರಾಜಭವನಕ್ಕೆ ತೆರಳಿ ಅಲ್ಲಿ ರಾಜ್ಯಪಾಲರ ಭೇಟಿ ಮಾಡುತ್ತೇವೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮಾತನಾಡಿ, ಶಾಸಕಾಂಗ ಪಕ್ಷದ ಸಭೆಯಲ್ಲಿ ನಮ್ಮ ನಾಯಕರನ್ನು ಆಯ್ಕೆ ಮಾಡಿ, ನಂತರ ರಾಜಭವನಕ್ಕೆ ತೆರಳಿ ನಮ್ಮ ಮನವಿ ಸಲ್ಲಿಸುತ್ತೇವೆ. ನಮ್ಮ ಬೇಡಿಕೆಗೆ ರಾಜ್ಯಪಾಲರಿಂದ ಸಮ್ಮತಿ ಸಿಗುವ ವಿಶ್ವಾಸ ಇದೆ ಎಂದರು.

ಕಾಂಗ್ರೆಸ್ ಹಿಂಬಾಗಿಲಿನಿಂದ ಅಧಿಕಾರ ಹಿಡಿಯಲು ಪ್ರಯತ್ನ ಮಾಡುತ್ತಿದೆ. ರಾಜ್ಯದ ಜನ ಅವರನ್ನು ತಿರಸ್ಕರಿಸಿದೆ. ಆದ ಮೇಲೂ ಮತ್ತೆ ಅಧಿಕಾರಕ್ಕೆ ಬಂದು ರಾಜ್ಯ ಲೂಟಿ ಮಾಡಲು ಮುಂದಾಗಿದ್ದಾರೆ. ಇವರ ಯತ್ನವನ್ನು ರಾಜ್ಯದ ಜನ, ನಾವು ಒಪ್ಪುವುದಿಲ್ಲ. ನಾವು ಅತಿ ದೊಡ್ಡ ಪಕ್ಷವಾಗಿದ್ದೇವೆ. ನಮಗೆ ರಾಜ್ಯಪಾಲರು ಅವಕಾಶ ನೀಡುತ್ತಾರೆ. ಇದುವರೆಗೂ ಅವರಿಂದ ಆಹ್ವಾನ ಬಂದಿಲ್ಲ. ಇಂದು ಶಾಸಕಾಂಗ ಪಕ್ಷದ ನಾಯಕರು ಮನವಿ ಸಲ್ಲಿಸಿದ ಮೇಲೆ‌ ಮುಂದಿನ ಬೆಳವಣಿಗೆ ನಡೆಯಲಿದೆ ಎಂದರು. ನಾವು ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ರಚಿಸುತ್ತೇವೆ. ಆಮೇಲೆ ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನ ನಡೆಯಲಿದೆ ಎಂದಿದ್ದಾರೆ.


ಸಂಬಂಧಿತ ಟ್ಯಾಗ್ಗಳು

shobha karandlaje Governor ವಿಶ್ವಾಸ ಸಮ್ಮತಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


test
  • test
  • test