'ಬಿಜೆಪಿಯ ಮಾಮ ಮಾರ್ಗ ಹೇಸಿಗೆ ತರಿಸುವ ಕೆಲಸ’- ಗುಂಡೂರಾವ್

Karnataka: To Form Government 3 parties are hardly trying

16-05-2018

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣಾ ಫಲಿತಾಂಶ ಅತಂತ್ರ ಹಿನ್ನೆಲೆ, ಈಗಾಗಲೆ ಮೂರೂ ಪಕ್ಷಗಳು ಸರ್ಕಾರ ರಚನೆಗೆ ತೀವ್ರ ಪೈಪೋಟಿ ನಡೆಸುತ್ತಿವೆ. ಇದರ ಬೆನ್ನಲ್ಲೇ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ ಗುಂಡೂರಾವ್ ‘ಸರ್ಕಾರ ರಚನೆಗೆ ಬೇರೆಯವರಿಗೆ ಅವಕಾಶ ನೀಡೋ ಮಾತೇ ಇಲ್ಲ' ಎಂದು ಪ್ರಧಾನಿ ಮೋದಿ ಹೇಳುತ್ತಾರೆ ಅಂದರೆ ಅವರು ಯಾವ ಮಟ್ಟಕ್ಕೆ ಇಳಿದಿದ್ದಾರೆ ಅನ್ನೋದು ಗೊತ್ತಾಗುತ್ತದೆ ಎಂದು ಕಿಡಿಕಾರಿದರು. ಜನ ಬಿಜೆಪಿಗೆ ಆಶೀರ್ವಾದ ಮಾಡಿಲ್ಲ. ಹೀಗಾಗಿ ಸರ್ಕಾರ ರಚನೆಯಿಂದ ದೂರ ಇದ್ದರೆ ಸರಿಯಾಗಿರುತ್ತೆ. ಅವರು ಸರ್ಕಾರ ರಚನೆ ಮಾಡಬೇಕು ಅಂದರೆ ವಾಮ ಮಾರ್ಗ ಹಿಡಿಯಬೇಕು. ಇದು ಹೇಸಿಗೆ ತರಿಸುವ ಕೆಲಸ, ಇಂತಹ ಕಾರ್ಯಕ್ಕೆ ಬಿಜೆಪಿ ಕೈ ಹಾಕೋದು ಬೇಡ ಎಂದು ಹೇಳಿದರು.


ಸಂಬಂಧಿತ ಟ್ಯಾಗ್ಗಳು

KPCC Dinesh Gundu Rao ಪೈಪೋಟಿ ವಿಧಾನಸಭೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ